ಕುಂದಾಪುರ, ಮೇ 21(Daijiworld News/SM): ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯ ಮಾಪನದ ಸಂದರ್ಭ ಮೌಲ್ಯಮಾಪಕರು ತೋರಿರುವ ಎಡವಟ್ಟೊಂದು ಬಯಲಿಗೆ ಬಂದಿದೆ. ಮರು ಮೌಲ್ಯಮಾಪನದಿಂದ ವಿದ್ಯಾರ್ಥಿಗೆ ಉಂಟಾದ ಅನ್ಯಾಯ ಇದೀಗ ನ್ಯಾಯ ಸಿಕ್ಕಿದೆ.
ಮರುಮೌಲ್ಯ ಮಾಪನದಲ್ಲಿ ಕೋಟದ ಕುಮಾರಿ ಸಂಜನಾ ಜಗದೀಶ್ ನಾವಡ 625ರಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಎಸ್ ಎಸ್ ಎಲ್ ಸಿಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಹೆಮ್ಮೆಯಿಂದ ಬೀಗುತ್ತಿದ್ದಾರೆ.
ಇವರು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ವಿಧ್ಯಾರ್ಥಿಯಾಗಿದ್ದಾರೆ. ಈ ಹಿಂದೆ 620 ಅಂಕಗಳನ್ನು ಅವರು ಪಡೆದಿದ್ದರು. ಈ ಅಂಕಗಳು ಆಕೆಗೆ ತೃಪ್ತಿ ನೀಡಿರಲಿಲ್ಲ. ಈ ಹಿನ್ನೆಲೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಇದೀಗ ಅಧಿಕ ಅಂಕ ಪಡೆದಿದ್ದು, ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.