ನಾನು ಬಲವಂತವಾಗಿ ಮತಾಂತರ ಹೊಂದಿಲ್ಲ ಅಥವಾ ನನ್ನದು ಲವ್ ಜಿಹಾದ್ ಪ್ರಕರಣವೂ ಅಲ್ಲ. ಪತಿಯೊಂದಿಗೆ ಬದುಕಲು ಬಿಡಿ ಎಂದು ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ಹೇಳಿದ್ದಾಳೆ. ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ.27 ರಂದು ಸುಪ್ರೀಂಕೋರ್ಟಿಗೆ ಹಾಜರಾಗುವ ಹಿನ್ನಲೆಯಲ್ಲಿ ದೆಹಲಿಗೆ ಹೊರಟಿರುವ ಹಾದಿಯಾ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದಳು. ಹಾದಿಯಾ ಪ್ರಕರಣ ನಿಜಕ್ಕೂ ಲವ್ ಜಿಹಾದ್ ಪ್ರಕರಣವೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ತನ್ನ ಮುಂದೆ ನ.27 ರಂದು ಖುದ್ದು ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಸೋಮವಾರ ಹಾದಿಯಾ ಕುಟುಂಬ ನ್ಯಾಯಾಲಯಕ್ಕೆ ಹಾಜರಾಗಲಿದೆ.