ಕುದ್ರೋಳಿ, ಆ.15(DaijiworldNews/AK): ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ನಲ್ಲಿ ನಡೆಯಿತು.



ಮೇಜರ್ ದಾಮೋದರ್ ಸುವರ್ಣ ಯೆಯ್ಯಾಡಿ ಇವರು ರಾಷ್ಟ್ರ ಧ್ವಜಾರೋಹಣ ಗೈದು ದೇಶದ ಸ್ವಾತಂತ್ರ್ಯ ತ್ಯಾಗ ಬಲಿದಾನದ ಮೂಲಕ ಲಭಿಸಿದೆ.ಕಾನೂನು ಪರಿಪಾಲನೆ ಜತೆಗೆ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಅನುಭವಿಸಬೇಕು.ದೇಶದ ಏಳಿಗೆಗಾಗಿ ಕೊಡುಗೆ ನೀಡಬೇಕೆಂದರು.
ಸಹನಾ ಕುಂದರ್ ಸೂಡಾ ಮಾತನಾಡಿ, ದೇಶದಲ್ಲಿ ನಮ್ಮ ಯುವ ಸಮೂಹಕ್ಕೆ ಸ್ವಾತಂತ್ರದ ಅರ್ಥಪೂರ್ಣ ಆಚರಣೆ ಹಾಗೂ ಮಹಿಳಾ ಸಮಾಜದ ಮೇಲೆ ನಡೆಯುತ್ತಿರುವ ಅನಾಚಾರವನ್ನು ತಡೆಗಟ್ಟಲು ಬೇಕಾದ ಸೂಕ್ತ ಮಾರ್ಗದರ್ಶನದ ಅಗತ್ಯವಿದ್ದು ಇದನ್ನು ನಾವೆಲ್ಲಾ ಪರಿಗಣಿಸಿ ಜೀವನ ನಡೆಸಬೇಕು ಎಂದರು.
ಬಿರುವೆರ್ ಕುಡ್ಲದ ಯುವಕರ ಸಮೂಹವು ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ ಮತ ವನ್ನು ನೋಡದೆ ಬಡ ವರ್ಗಕ್ಕೆ ಆರ್ಥಕ ನೆರವು ಹಾಗೂ ಅರ್ಹ ಬಡ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತಿರುವ ಪುಣ್ಯದ ಕೆಲಸವನ್ನು ಮಾಡುತ್ತಾ ಬರುತ್ತಿದೆ.ಇದರ ಜತೆಗೆ ಬಿರುವೆರ್ ಕುಡ್ಲವು ಜನಪರ ಸಮಾಜ ಸೇವಾ ಕಾರ್ಯ ನಡೆಸುತ್ತಾ ಬರುತ್ತಿದೆ.ಈ ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದ ಸುಮಾರು 10 ಕೋ.ರೂಗಳಷ್ಟು ನಿಧಿಯನ್ನು ಅಶಕ್ತರ ಚಿಕಿತ್ಸೆಗೆ, ಶಿಕ್ಷಣಕ್ಕೆ, ವಿವಿಧ ಸವಲತ್ತು ವಿತರಣೆಗೆ ನೀಡಿದೆ. ಆಂಬುಲೆನ್ಸ್ ಸೇವೆ,ಕೊರೊನಾ ಸಂದರ್ಭ ನೆರವು ಹಾಗೂ ಇದೀಗ 9ನೇ ಮನೆ ನಿರ್ಮಾಣ ಮಾಡಿ ಬಡ ವರ್ಗಕ್ಕೆ ಶೀಘ್ರ ಹಸ್ತಾಂತರ ಮಾಡಲಿದೆ.ಇದೆಲ್ಲಾ ಇತರ ಸಂಘಟನೆಗಳಿಗೆ ಮಾದರಿಯಾಗಿದೆ.
ಪ್ರಮೋದ್ ಬಳ್ಳಾಲ್ ಭಾಗ್,ಲತೀಶ್ ಪೂಜಾರಿ ಬಳ್ಳಾಲ್ ಭಾಗ್,ವಿದ್ಯಾ ರಾಕೇಶ್ ,ಪ್ರವೀಣ್ ಎಸ್ ಸುವರ್ಣ ಬಗಂಬಿಲ, ಧನ್ ರಾಜ್ ಪೂಜಾರಿ ಚಿಲಿಂಬಿ,ಜಿತೇಶ್ ಜೈನ್,ದರ್ಶನ್ ಜೈನ್,ಜೀವನ್ ತಲ್ವಾರ್,ಸತೀಶ್ ಪೂಜಾರಿ ಅಶೋಕ ನಗರ,ರಾಮ್ ಎಕ್ಕೂರು,ರಾಕೇಶ್ ಚಿಲಿಂಬಿ,ಮನೋಜ್ ಶೆಟ್ಟಿ ಚಿಲಿಂಬಿ,ರೇನಿತ್ ರಾಜ್ ,ಹರೀಶ್ ಹೊಯ್ಗೆ ಬೈಲ್ ಗಿರೀಶ್ ಬತ್ತೇರಿ,ಗೌತಮ್ ಬತ್ತೇರಿ,ಪ್ರಜ್ವಲ್ ಶೆಟ್ಟಿ ಕಾಪು,ಸುನಿಲ್ ಶೆಟ್ಟಿ ಬಳ್ಳಾಲ್ ಭಾಗ್,ರಮೇಶ್ ಬಿಜೈ,ಕೃಷ್ಣಪ್ಪ ನಾಯಕ್,ಗಿರಿರಾಜ್ ಕೋಟ್ಯಾನ್,ವಿಶ್ವನಾಥ್ ಭವಾನಿ, ಕಿಶೋರ್ ಬಾಬು,ಯತೀಶ್ ಬಳ್ಳಾಲ್ ಭಾಗ್,ಕಿರಣ್ ಬಂಟ್ವಾಳ, ಕಿಶೋರ್ ಉಡುಪಿ,ರಾಜೇಶ್ ಬೆಳ್ತಂಗಡಿ,ಅಶೋಕ ಕಾಂಚನ್(ಕ್ವಾಲಿಟಿ ಬೇಕರಿ)ಲತೀಶ್ ವಾಮಂಜೂರ್, ಪ್ರಶಾಂತ್ ಬಜ್ಪೆರೋಹಿದಾಸ್ ಕದ್ರಿ,ರಾಜೇಶ್ ಉರ್ವ,ಮಹೇಶ್ ಅಶೋಕ ನಗರ,ಗಣೇಶ್ ಆಕಾಶ್ ಭವನ ಪ್ರವೀಣ್ ಅಂಬು,ದಿನಿಲ್ ಅಶೋಕ ನಗರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳನ್ಬು ಗುರುತಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ ,ಮುಂದೆಯೂ ಇಂತಹ ಉತ್ತಮಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.
ಸಿದ್ದಕಟ್ಟೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು. ಲಿಖಿತ ಅವರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.ಪೋಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕದಳ, ಎನ್.ಸಿ.ಸಿ. ಹಾಗೂ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಅತ್ಯಧಿಕ ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಾಕೃತಿಕ ವಿಕೋಪದ ಸಂದರ್ಭದಲ್ಲಿ ಅವಿರತ ಸೇವೆ ಸಲ್ಲಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಮೆಸ್ಕಾಂ ಸಿಬ್ಬಂದಿಗಳಿಗೆ, ಅರಣ್ಯ ಇಲಾಖೆ, ಅಶಾ ಕಾರ್ಯಕರ್ತೆಯರು, ಬಿ.ಎಲ್.ಒ ಗಳಿಗೆ, ಬಂಟ್ವಾಳ ಪುರಸಭಾ ಇಲಾಖೆಯ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.
ವೇದಿಕೆಯಲ್ಲಿ ಬೂಡ ಅಧ್ಯಕ್ಷ ಬೇಬಿ ಕುಂದರ್, ತಾ.ಪಂ.ಇ.ಒ.ಸಚಿನ್, ತೋಟಗಾರಿಕೆ ಇಲಾಖೆ ಪ್ರದೀಪ್ ಡಿ.ಸೋಜ, ನಗರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ, ಬಿ.ಇ.ಒ.ಮಂಜುನಾಥನ್, ಸಿ.ಡಿ.ಪಿ.ಒ.ಮಮ್ತಾಜ್, ಪುರಸಭಾ ಸಿ.ಒ.ಲೀನಾಬ್ರಿಟ್ಟೋ, ಅರಣ್ಯ ಇಲಾಖೆಯ ಪ್ರಫುಲ್ ರೈ, ಎ.ಪಿ.ಎಂ.ಸಿ.ಕಾರ್ಯದರ್ಶಿ ಸಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.