ಕಾಸರಗೋಡು ನ 27 : ಮೊಬೈಲ್ ಮಳಿಗೆಯಲ್ಲಿ ಕೆಲಸಕ್ಕಿದ್ದ ಕೆಲಸಗಾರರೇ ಅಂಗಡಿಯನ್ನು ದೋಚಿದ ಘಟನೆ ನ.೨೬ ಸೋಮವಾರ ಕಾಸರಗೋಡಿನಲ್ಲಿ ನಗರದ ಹೊಸಬಸ್ಸು ನಿಲ್ದಾಣ ಸಮೀಪದ ಮೊಬೈಲ್ ರಖಂ ಮಳಿಗೆಯಲ್ಲಿ ನಡೆದಿದೆ. ಸುಮಾರು ೧೫ ಲಕ್ಷ ರೂ. ಮೌಲ್ಯದ ಸಾಮಾಗ್ರಿ ಹಾಗೂ ಬೈಕ್ ಸಹಿತ ರಾಜಸ್ಥಾನ ನಿವಾಸಿಗಳು ಎನ್ನಲಾದ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ರಾಜಸ್ಥಾನದ ಪ್ರಕಾಶ್ ಕುಮಾರ್ ( 26) ಮತ್ತು ಮುಖೇಶ್ ( 21) ನಾಪತ್ತೆಯಾದವರು. ಒಂದು ವರ್ಷದ ಹಿಂದೆ ಮಾವುಂಗಾಲ್ ನ ಪ್ರಭಾಕರ ಎಂಬವರು ಮಳಿಗೆ ಆರಂಭಿಸಿದ್ದರು. ರಾಜಸ್ತಾನ ನಿವಾಸಿಗಳಾದ ಇಬ್ಬರು ಕಾರ್ಮಿಕರನ್ನು ಕೆಲಸಕ್ಕೆ ನಿಲ್ಲಿಸಿದ್ದರು. ಸಾಮಾಗ್ರಿ ಮಾರಾಟ ಹಾಗೂ ಇತರ ವಹಿವಾಟುಗಳನ್ನು ಇವರಿಗೆ ಒಪ್ಪಿಸಲಾಗಿತ್ತು. ಪ್ರಭಾಕರ ಕಾಞಂಗಾಡ್ ನಲ್ಲೂ ಮಳಿಗೆ ಹೊಂದಿದ್ದು , ಅಪರೂಪಕ್ಕೊಮ್ಮೆ ಕಾಸರಗೋಡು ಮಳಿಗೆಗೆ ಬಂದು ತೆರಳುತ್ತಿದ್ದರು. ಈ ನಡುವೆ ಇಬ್ಬರು ನಾಪತ್ತೆಯಾಗಿದ್ದು , ಅಂಗಡಿಯಲ್ಲಿದ್ದ ಸಾಮಾಗ್ರಿ ಹಾಗೂ ಮೊಬೈಲ್ ಸಾಮಾಗ್ರಿ ಮಾರಾಟಕ್ಕೆ ಬಳಸುತ್ತಿದ್ದ ಬೈಕ್ ಸಹಿತ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪ್ರಭಾಕರ ರವರ ದೂರಿನಂತೆ ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.jpg)
.jpg)