ಕಾಸರಗೋಡು, ಮೇ 23(Daijiworld News/SM): ಸಾಕಷ್ಟು ಕುತೂಹಲ ಕೆರಳಿಸಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದೆ. ಸುಮಾರು 30 ವರ್ಷಗಳ ಬಳಿಕ ಕಾಸರಗೋಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಲಭಿಸಿದೆ.
ಆರಂಭದಿಂದಲೇ ಏರಿಳಿಕೆ ಕಂಡು ಬಂದರೂ ಅಂತಿಮ ಸುತ್ತಿಗೆ ಬಂದಾಗ ಉಣ್ಣಿ ತ್ತಾನ್ ಮೇಲುಗೈ ಸಾಧಿಸಿದರು. ರಾಜ್ ಮೋಹನ್ ಉಣ್ಣಿ ತ್ತಾನ್ 4,70,345 , ಸತೀಶ್ಚಂದ್ರನ್ 4,28, 697 ಮತಗಳನ್ನು ಪಡೆದಿದ್ದಾರೆ. ಆದರೆ, ಬಿಜೆಪಿಯ ರವೀಶ ತಂತ್ರಿ ಕುಂಟಾರು 1,73,934 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನು ೧೯೮೪ ರ ಬಳಿಕ ಕಾಂಗ್ರೆಸ್ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದು, ಮೊದಲ ಬಾರಿಗೆ ಸ್ಪರ್ಧಿಸಿದ ಉಣ್ಣಿ ತ್ತಾನ್ ಗೆಲುವು ಸಾಧಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಇದುವರೆಗೆ ನಡೆದ 15 ಚುನಾವಣೆಗಳಲ್ಲಿ ಮೂರು ಬಾರಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತ್ತು . 16ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಕೆಂಪು ಕೋಟೆಯನ್ನು ಛಿದ್ರಗೊಳಿಸಿದೆ. ಮೂರು ದಶಕಗಳ ಬಳಿಕ ಕಾಂಗ್ರೆಸ್ ಗೆಲುವಿನ ಪತಾಕೆಯನ್ನು ಹಾರಿಸಿದ್ದು, ಸಿಪಿಎಂ ನ ಭದ್ರಕೋಟೆಗೆ ಯನ್ನು ಛಿದ್ರವಾಗಿದೆ.
1984 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆ ಸ್ ನ ಐ. ರಾಮ ರೈ ಕೊನೆಯದಾಗಿ ಗೆದ್ದವರಾಗಿದ್ದಾರೆ. ಅಂದು ಸುಮಾರು 11 ಸಾವಿರ ಮತಗಳ ಅಂತರದಿಂದ ರಾಮ ರೈಯವರು ಗೆಲುವು ಸಾಧಿಸಿದ್ದರು. 1989 ರ ಬಳಿಕ ನಡೆದ ಎಲ್ಲಾ ಚುನಾವಣೆಯಲ್ಲೂ ಸಿಪಿಎಂ ಮಾತ್ರ ಗೆಲುವು ಸಾಧಿಸಿದೆ.
2014 ರಲ್ಲಿ ಕಾಂಗ್ರೆಸ್ 6,900 ಮತಗಳ ಅಂತರದಿಂದ ಸೋಲು ಕಂಡಿತ್ತು . 2014 ರಲ್ಲಿ 1.8 ಲಕ್ಷ , 2009 ರಲ್ಲಿ 68ಸಾವಿರ ಮತಗಳಿಂದ ಕಾಂಗ್ರೆಸ್ ಸೋಲು ಕಂಡಿತ್ತು.
ಈ ಬಾರಿ ಕಾಂಗ್ರೆಸ್ ಪ್ರತಿಷ್ಠೆಯ ಕಣವಾಗಿ ಕಾಂಗ್ರೆಸ್ ತೆಗೆದುಕೊಂಡಿತ್ತು. ಕಾಂಗ್ರೆಸ್ ವಕ್ತಾರರಾಗಿದ್ದ ರಾಜ್ ಮೋಹನ್ ಉನ್ನಿತ್ತಾರವರನ್ನು ಕಣಕ್ಕಿಲಿಸಿತ್ತು. ಸಿಪಿಎಂ ಕೂಡಾ ಹೊಸ ಮುಖ ವನ್ನು ಕಣಕ್ಕಿಳಿಸಿತ್ತು. ಮಾಜಿ ಶಾಸಕ ಕೆ . ಪಿ ಸತೀಷ್ಚಂದ್ರನ್ ರನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಿತ್ತು. ಆದರೆ ರಾಜ್ ಮೋಹನ್ ಉನ್ನಿತ್ತಾನ್ ಗೆಲ್ಲುವ ಮೂಲಕ ಮೂರು ದಶಕಗಳ ಬಳಿಕ ಕಾಂಗ್ರೆಸ್ ಸಿಪಿಎಂ ನಿಂದ ಕ್ಷೇತ್ರವನ್ನು ಕಸಿದುಕೊಂಡು ಇತಿಹಾಸ ಸೃಷ್ಟಿಸಿದೆ.