ಬಂಟ್ವಾಳ, ಮೇ 24(Daijiworld News/MSP): ದೇಶ, ರಾಜ್ಯ ಮತ್ತು ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಹಿರಿಯ ಕಾಂಗ್ರೆಸಿಗ ಬಿ.ಜನಾರ್ದನ ಪೂಜಾರಿ ನಿರಾಕರಿಸಿದ್ದಾರೆ.
ಈ ಕುರಿತು ಬಂಟ್ವಾಳದ ಮಾಧ್ಯಮ ಪ್ರತಿನಿಧಿಗಳು ಅವರ ಮನೆಗೆ ತೆರಳಿದ್ದ ಸಂದರ್ಭ ಪೂಜಾರಿ ಮನೆಯವರು, ಅವರು ವಿಶ್ರಾಂತಿಯಲ್ಲಿದ್ದು, ಮಾಧ್ಯಮಗಳೊಂದಿಗೆ ಯಾವುದೇ ಮಾತುಕತೆಯನ್ನಾಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು. ಚುನಾವಣಾ ಪೂರ್ವದಲ್ಲಿ ಮಿಥುನ್ ರೈ ಪರ ಮತ್ತು ಮೋದಿ ವಿಚಾರವಾಗಿ ಹೇಳಿಕೆಗಳಿಂದ ಪೂಜಾರಿ ಸುದ್ದಿಯಲ್ಲಿದ್ದರು.