ನವದೆಹಲಿ, ಆಗಸ್ಟ್ 16, (DaijiworldNews/TA) : 2027 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ. ಗೀತಾ ಗೋಪಿನಾಥ್ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯು ಕಳೆದ ಆರ್ಥಿಕ ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ ಮತ್ತು ಆ ಕ್ಯಾರಿಓವರ್ ಪರಿಣಾಮಗಳು ಈ ವರ್ಷದ ನಮ್ಮ ಮುನ್ಸೂಚನೆಯ ಮೇಲೆ ಪರಿಣಾಮ ಬೀರುತ್ತಿವೆ. ಇತರ ಅಂಶವೆಂದರೆ ನಾವು ಖಾಸಗಿ ಬಳಕೆ ಚೇತರಿಸಿಕೊಳ್ಳುವುದನ್ನು ನೋಡುತ್ತಿದ್ದೇವೆ ಎಂದು ಗೋಪಿನಾಥ್ ಹೇಳಿದರು.
IMF 2024-25 ರ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆಯ ಪ್ರಕ್ಷೇಪಣವನ್ನು 7% ಗೆ ಹೆಚ್ಚಿಸಿದೆ. ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರವು ನೀಡಿದ 6.5% ಪ್ರೊಜೆಕ್ಷನ್ಗಿಂತ ಇದು ತುಸು ಹೆಚ್ಚಿದೆ. ಇದರಿಂದ 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು IMF ಭವಿಷ್ಯ ನುಡಿದಿದ್ದಾರೆ