ಬೆಂಗಳೂರು, ಆ. 17 (DaijiworldNews/TA) : ರಾಜ್ಯ ರಾಜಕಾರಣದಲ್ಲಿ ಮಹತ್ವದ ತಿರುವು ಗೋಚರವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸದ್ಯ ರಾಜ್ಯ ಸರ್ಕಾರದಲ್ಲಿ ಕೊಂಚ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಒಂದೆಡೆ ಸಿಎಂ ಪರ ಬೆಂಬಲಿಗರು ರಾಜ್ಯಪಾಲರ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದರೆ, ಮತ್ತೊಂದೆಡೆ ಸಿಎಂ ರಾಜಿನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಈ ಬದಲಾವಣೆಯ ಮಧ್ಯೆ ಆಯೋಜಿಸಲಾಗಿದ್ದ ಸಂಪುಟ ಸಭೆಯೂ ರದ್ದಾಗಿದೆ. ಮತ್ತೊಂದೆಡೆ ಡಿಸಿಎಂ ಡಿಕೆಶಿ ವಿಚಾರತಿಳಿದಂತೆ ಸಿಎಂ ಸಿದ್ದರಾಮಯ್ಯ ಮನೆಗೆ ದೌಡಾಯಿಸಿದ್ದಾರೆ.
ಪ್ರಾಸಿಕ್ಯೂಷನ್ ವಿರುದ್ಧ ಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು ಹೇಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಅಂತ ಅವರ ನಡುವೆ ಚರ್ಚೆ ನಡೆದಿರಬಹುದು ಎಂಬುವುದಾಗಿ ಅಂದಾಜಿಸಲಾಗಿದೆ.