ಹೊಸದಿಲ್ಲಿ ಆ.23 (DaijiworldNews/TA) : ಬಿಹಾರದ 24 ವರ್ಷದ ಶುಭಂ ಕುಮಾರ್ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದು, ಐಎಎಸ್ ಅಧಿಕಾರಿಯಾಗುವ ಮತ್ತು ಹಿಂದುಳಿದವರಿಗೆ ಸೇವೆ ಸಲ್ಲಿಸುವ ತನ್ನ ಕನಸು ನನಸಾಗಿದೆ ಎಂದು ಹೇಳಿದ್ದಾರೆ.
ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಬಡತನ ನಿರ್ಮೂಲನೆ ಅವರ ಗಮನದ ಕ್ಷೇತ್ರಗಳಾಗಿವೆ ಎಂದು ಹೇಳಿದ್ದಾರೆ. ಕುಮಾರ್ ತಮ್ಮ ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು.
ಇದಕ್ಕೂ ಮೊದಲು, ಅವರು 2019 ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಭಾರತೀಯ ರಕ್ಷಣಾ ಖಾತೆಗಳ ಸೇವೆಯಲ್ಲಿ (IDAS) ಆಯ್ಕೆಯಾಗಿದ್ದರು. ಕುಮಾರ್ ಅವರು 2018 ರ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಅಂದುಕೊಂಡಂತೆ ಜಯಗಳಿಸಲಿಲ್ಲ.
ಐಐಟಿ ಬಾಂಬೆಯಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿ (ಸಿವಿಲ್ ಇಂಜಿನಿಯರಿಂಗ್) ಪದವೀಧರರಾಗಿರುವ ಅವರು 2020 ರ ಪರೀಕ್ಷೆಯಲ್ಲಿ ಮಾನವಶಾಸ್ತ್ರವನ್ನು ತಮ್ಮ ಐಚ್ಛಿಕ ವಿಷಯದ ವಿಚಾರವಾಗಿ ಪದವಿ ಪಡೆದವರು.