ಹುಬ್ಬಳ್ಳಿ,ಆ.23(DaijiworldNews/AK): ಗಣಿಗೆ ಅನುಮತಿ ನೀಡಿದ ಆದೇಶದಲ್ಲಿರುವುದು ತಮ್ಮ ಸಹಿ ಅಲ್ಲ, ಅದು ನಕಲಿ ಎಂದು ಈಗ ಹೇಳುತ್ತಿರುವ ಎಚ್.ಡಿ.
ಕುಮಾರಸ್ವಾಮಿ ಅವತ್ತೇ ಏಕೆ ದೂರು ನೀಡಲಿಲ್ಲ? ಇಂತಹ ಹೇಳಿಕೆಯನ್ನು ಕೇಂದ್ರ ಸಚಿವರಾದವರು ಕೊಡಲಾಗುತ್ತದೆಯೇ ? ಎಂದು ಆರೋ ಗ್ಯ ಸಚಿವ ದಿನೇಶ ಗುಂಡೂರಾವ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗೆ ಅಕ್ರಮವಾಗಿ ಅನುಮತಿ ನೀಡಿದ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಪಾತ್ರ ಇರುವುದು ಸ್ಪಷ್ಟವಾಗಿದೆ. ಇದರ ಬಗ್ಗೆ ತನಿಖೆಯೂ ಆಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ನೀಡಬೇ ಕೆಂದು ಲೋ ಕಾಯುಕ್ತರು ರಾಜ್ಯಪಾಲರಿಗೆ ಕೋರಿದ್ದಾರೆ ಎಂದರು.
ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಕೊಡಲೇ ಬೇಕಾಗುತ್ತದೆ. ಇಲ್ಲದಿದ್ದರೆ, ಕೇಂದ್ರ ಸರ್ಕಾ ರಕ್ಕೆ ಕಳುಹಿಸಬಹುದು. ಕುಮಾರಸ್ವಾಮಿ ರಾಜೀನಾಮೆ ಕೊಡಲೇ ಬೇಕಾಗುತ್ತದೆ. ಕುಮಾರಸ್ವಾಮಿ ಅವರ ತಲೆದಂಡವಾಗಲಿ ಎಂದು ಕೊಂಡೇ ಬಿಜೆಪಿಯವರು ಮಾಡಿಸಿರಬಹುದು. ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿದೆ ಎಂದು ಆರೋಪಿಸಿದರು.
ಮುಖ್ಯಮಂ ತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖೆಯಾಗಿಲ್ಲ, ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅವರ ವರ್ಚ ಸ್ಸು ಹಾಳುಮಾಡುವ ಉದ್ದೇ ಶದಿಂದಲೇ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರ ಮೇಲೆ ಒತ್ತಡ ತಂದು, ಪ್ರಾಸಿಕ್ಯೂಷನ್ ಅನುಮತಿ ಕೊಡಿಸಿದೆ ಎಂದು ಆರೋ ಪಿಸಿದರು.