ಚೆನ್ನೈ, ಆ.24(DaijiworldNews/TA): ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 11 ಭಾರತೀಯ ಮೀನುಗಾರರನ್ನು ಕಡಲ ಉಲ್ಲಂಘನೆಯ ಆರೋಪದ ಮೇಲೆ ಬಂಧಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರಬರೆದಿದ್ದಾರೆ.
"ತಮಿಳುನಾಡಿನ ಮೀನುಗಾರರನ್ನು ಬಂಧಿಸಿರುವ ಮತ್ತೊಂದು ಘಟನೆಯ ಬಗ್ಗೆ ನಾನು ನಿಮಗೆ ತೀವ್ರ ಕಳವಳದಿಂದ ಬರೆಯುತ್ತಿದ್ದೇನೆ,ನಾಗಪಟ್ಟಣಂ ಜಿಲ್ಲೆಯ ಕೋಡಿಯಾಕರೈ ಆಗ್ನೇಯಕ್ಕೆ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರನ್ನು ಬಂಧಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಕಳೆದ ಎರಡು ವಾರಗಳಲ್ಲಿ, ಶ್ರೀಲಂಕಾದ ಅಪರಿಚಿತ ವ್ಯಕ್ತಿಗಳಿಂದ ಸಮುದ್ರದಲ್ಲಿ ಮೀನುಗಾರರ ಮೇಲೆ ದಾಳಿಯ ಒಂದೆರಡು ನಿದರ್ಶನಗಳು ನಡೆದಿದ್ದು, ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.
ನಮ್ಮ ಎಲ್ಲಾ ಮೀನುಗಾರರು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ತಕ್ಷಣದ ಮತ್ತು ಕಾಂಕ್ರೀಟ್ ರಾಜತಾಂತ್ರಿಕ ಪ್ರಯತ್ನಗಳನ್ನು ಪ್ರಾರಂಭಿಸಲು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ" ಎಂದು ಸ್ಟಾಲಿನ್ ಜೈಶಂಕರ್ ಅವರಿಗೆ ಹೇಳಿದ್ದಾರೆ.