ನವದೆಹಲಿ, ಆ.25(DaijiworldNews/TA):ಆಕ್ಟೋಬರ್ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಎಸ್ಸಿಒ, ಸಿಎಚ್ಜಿ ಶೃಂಗಸಭೆಗೆ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿದೆ.
ಅಕ್ಟೋಬರ್ 15-16 ರಂದು ಯುರೇಷಿಯನ್ ಗುಂಪಿನ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ನಂತರ ಎರಡನೇ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ SCO ಶೃಂಗಸಭೆಯನ್ನು ಪಾಕಿಸ್ತಾನ ಈ ವರ್ಷ ಆಯೋಜಿಸುತ್ತಿದೆ.
ಅಕ್ಟೋಬರ್ 15-16ರಂದು ನಡೆಯಲಿರುವ ಸಭೆಯಲ್ಲಿ ಪಾಕಿಸ್ತಾನವು ಆತಿಥ್ಯವಹಿಸಲಿದೆ ಎಂದು ವರದಿಯಾಗಿದೆ.ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ಅವರು ಅಂದಿನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಉತ್ತಮ ಬಾಂಧವ್ಯ ಆರಂಭಿಸಿದ್ದರು.
ಕಳೆದ ವರ್ಷ ಬಿಷ್ಕೆಕ್ನಲ್ಲಿ ನಡೆದ ಸಿಎಚ್ಜಿ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಆದರೆ, ಈ ಬಾರಿ ಯಾವುದೇ ಭಾರತೀಯ ಸಚಿವರಿಗೆ ಪಾಕಿಸ್ತಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಾರೆಯೋ ಇಲ್ಲವೋ ಎಂಬುದು ಇನ್ನೂ ಅಸ್ಪಷ್ಟ.