ಚಂಡೀಗಢ, ಆ.26(DaijiworldNews/AA): ಯುಪಿಎಸ್ಸಿ ಮತ್ತು ವೈದ್ಯಕೀಯವು ಭಾರತದಲ್ಲಿ ಎರಡು ಪ್ರತಿಷ್ಠಿತ ವೃತ್ತಿಗಳು. ವೈದ್ಯಕೀಯ ವೃತ್ತಿಯ ಜೊತೆಗೆ ಯುಪಿಎಸ್ಸಿ ಪರೀಕ್ಷೆ ಭೇದಿಸಿದ ಡಾ. ಅಕ್ಷಿತಾ ಗುಪ್ತಾ ಅವರ ಯಶೋಗಾಥೆ ಇದು.
ಡಾ ಅಕ್ಷಿತಾ ಗುಪ್ತಾ ಅವರು ಮೂಲತಃ ಚಂಡೀಗಢದವರು. ಅವರ ತಂದೆ ಪವನ್ ಗುಪ್ತಾ ಪಂಚಕುಲದ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿದ್ದಾರೆ. ಆಕೆಯ ತಾಯಿ ಮೀನಾ ಗುಪ್ತಾ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಗಣಿತ ಉಪನ್ಯಾಸಕಿ.
ಕಾಲೇಜಿನ ಮೂರನೇ ವರ್ಷದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದಳು. ನಂತರ, ಅಕ್ಷಿತಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡಿದ್ದಳು. ಅವರು ಆಸ್ಪತ್ರೆಯಲ್ಲಿ 14 ಗಂಟೆಗಳ ಕಾಲ ಕೆಲಸ ಮಾಡಿ, ವಿರಾಮದ ಸಮಯದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಅಕ್ಷಿತಾ ಅವರು 2020 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 69 ನೇ ರ್ಯಾಂಕ್ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುತ್ತಾರೆ.
ಇದಲ್ಲದೆ, ಡಾ ಅಕ್ಷಿತಾ ಗುಪ್ತಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಟ್ವಿಟರ್ನಲ್ಲಿ 18 ಸಾವಿರ ಮತ್ತು ಇನ್ಸ್ಟಾಗ್ರಾಮ್ನಲ್ಲಿ 24 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ.