ಹುಬ್ಬಳ್ಳಿ,ಆ.26(DaijiworldNews/Akj): ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ದಾಖಲೆಗಳನ್ನು ನಮಗೆ ನೀಡಿದ್ದೇ ಕಾಂಗ್ರೆಸ್ ನಾಯಕರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಏನೂ ಇರಲಿಲ್ಲ, ಕಾಂಗ್ರೆಸ್ನವರೇ ನಮಗೆ ದಾಖಲೆ ಕೊಟ್ಟಿದ್ದಾರೆ ಎಂದು ಹೇಳಿದರು.
ದಾಖಲೆ ನಮಗೆ ಯಾರು ಕೊಟ್ಟಿದ್ದಾರೆ ಎಂಬುವುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಮನೆಗೆ ಹೋಗುತ್ತಾರೆ, ಕಾಂಗ್ರೆಸ್ನಲ್ಲಿ ಹೊಸ ಸಿಎಂ ಬರುತ್ತಾರೆ. ಹೀಗಾಗಿ ಬಿಜೆಪಿ ನಾಯಕರು ಸಿಎಂ ಬದಲಾವಣೆ ಬಗ್ಗೆ ಹೇಳುತ್ತಿದ್ದಾರೆ. ದೆಹಲಿಗೆ ಹೋಗಿ ಒಮ್ಮೆ ರಾಹುಲ್ ಗಾಂಧಿ ಬಳಿ, ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ವಿವರಣೆ ಕೊಡುತ್ತಾರೆ ಎಂದರು.
ತಮಗೆ ಏನೇನು ಬೇಕು ಅದನ್ನು ಕಾಂಗ್ರೆಸ್ ಉಸ್ತುವಾರಿಗಳು ಮಾಡುತ್ತಿದ್ದಾರೆ. ಹೈಕಮಾಂಡ್ ಸಿಎಂ ಅವರ ಪರವಾಗಿದ್ದರೆ ಸಿದ್ದರಾಮಯ್ಯ ಅವರು ಯಾಕೆ ಪದೇ ಪದೇ ದೆಹಲಿಗೆ ಹೋಗುತ್ತಾರೆ. ಕೇವಲ ಮುಡಾ ಅಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವೂ ಇದೆ. ಸಿದ್ದರಾಮಯ್ಯ ಅವರು ಕೇವಲ 79 ಕೋಟಿ ಹಗರಣ ಆಗಿದೆ ಅಂತಾರೆ. ಎಷ್ಟು ತಿಂದರೂ ಎಂದು ಆಕ್ರೋಶ ವಚ್ಯಕ್ತಪಡಿಸಿದರು.