ಪಶ್ಷಿಮ ಬಂಗಾಳ, ಆ.28(DaijiworldNews/AA): ಕಠಿಣ ಪರಿಶ್ರಮ ಮತ್ತು ಶ್ರದ್ಧೆಯೊಂದು ಇದ್ದರೆ ಯಾವುದೇ ವಯಸ್ಸಿನಲ್ಲಾದರೂ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ. ಹೀಗೆ 23ನೇ ವಯಸ್ಸಿಗೆ ಐಎಫ್ಎಸ್ ಅಧಿಕಾರಿಯಾದ ತಮಾಲಿ ಸಹಾ ಅವರ ಯಶೋಗಾಥೆ ಇದು.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ತಮಾಲಿ ಸಹಾ ಅವರು, ತನ್ನ ಶಾಲಾ ಶಿಕ್ಷಣವನ್ನು ಅಲ್ಲಿಯೇ ಮಾಡಿದಳು. ನಂತರ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಮಾಡಲು ಕೋಲ್ಕತ್ತಾಗೆ ತೆರಳಿದರು.
ತಮಾಲಿ ಸಹಾ ಅವರು ತನ್ನ ಪದವಿ ಶಿಕ್ಷಣ ಪಡೆಯುವ ವೇಳೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರಾರಂಭಿಸಿದರು. 2020 ರಲ್ಲಿ ಯುಪಿಎಸ್ಸಿ ಭಾರತೀಯ ಅರಣ್ಯ ಸೇವಾ ಪರೀಕ್ಷೆಯಲ್ಲಿ 94 ನೇ ರ್ಯಾಂಕ್ನೊಂದಿಗೆ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದರು.
ತಮಾಲಿ ಸಹಾ ಅವರು ಐಎಫ್ಎಸ್ ಅಧಿಕಾರಿಯಾಗಿ ಪಶ್ಚಿಮ ಬಂಗಾಳದಲ್ಲೇ ನೇಮಕಗೊಳ್ಳುತ್ತಾರೆ. ಇದರೊಂದಿಗೆ 23 ನೇ ವಯಸ್ಸಿನಲ್ಲಿ ಐಎಫ್ಎಸ್ ಅಧಿಕಾರಿಯಾಗುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.