ಬೆಂಗಳೂರು, ಆ.29(DaijiworldNews/TA): ಬಿಜೆಪಿಯವರ ಷಡ್ಯಂತ್ರಕ್ಕೆ ಫಲ ಸಿಗಲಿಲ್ಲ ಬದಲಾಗಿ ನಮಗೆ ಜಯ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಸಿಬಿಐ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು.
ಬಿಜೆಪಿಯವರ ಷಡ್ಯಂತ್ರದ ವಿರುದ್ಧ ನನಗೆ ಜಯ ಸಿಕ್ಕಿದೆ , ನಾವೆಲ್ಲಾ ಶ್ರಮ ಪಟ್ಟು, ಕಷ್ಟ ಪಟ್ಟು ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮೇಲೆ ಬಿಜೆಪಿ ಸರ್ಕಾರ ಸಾಕಷ್ಟು ಷಡ್ಯಂತ್ರ ಮಾಡಿದೆ. ನೂರಾರು ಆರೋಪ ಮಾಡಿದೆ, ಸಾವಿರಾರು ಕೇಸ್ ದಾಖಲಿಸಿದೆ ಎಂದು ಹೇಳಿಕೆ ನೀಡಿದ್ದಾರೆ.