ಬೆಂಗಳೂರು,ಸೆ.05 (DaijiworldNews/AK): ಸಾಮಾಜಿಕ ಕಾರ್ಯ ಕರ್ತ ,ನಟ ಚೇ ತನ್ ನೇತೃತ್ವದಲ್ಲಿ 'ಫೈರ್' ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿ, ಕೇರಳದ ನ್ಯಾಯಮೂರ್ತಿ ಹೇಮಾಸಮಿತಿ ಮಾದರಿಯಲ್ಲಿ ಕರ್ನಾಟದಲ್ಲೂ ಕನ್ನಡ ಚಿತ್ರೋ ದ್ಯಮದಲ್ಲಿ ಕಲಾವಿದೆಯರ ಮೇ ಲೆ
ಆಗುತ್ತಿರುವ ಶೋಷಣೆಯ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಒತ್ತಾಯಿಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ಚೇ ತನ್, ನಟಿ ಶೃತಿ ಹರಿಹರನ್ ಸೇರಿದಂತೆ ಇತರರು ಕೂಡಾ ಇದ್ದರು. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸಮಸ್ಯೆ ಅಧ್ಯಯನ ಮಾಡಬೇಕು. ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ತಡೆಗಟ್ಟುವ ಸಲುವಾಗಿ ಸಮಿತಿ ರಚಿಸಬೇಕು ಎಂದು ನಿಯೋಗ ಒತ್ತಾಯಿಸಿದೆ. ಈಗಾಗಲೇ ಫೈರ್ ಸಂಸ್ಥೆ 130 ಕ್ಕೂ ಮಂದಿ ಸಹಿ ಮಾಡಿರುವ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿದೆ.