ನವದೆಹಲಿ, ಸೆ.8 (DaijiworldNews/TA):ಮೊಸಳೆ ಕಣ್ಣೀರು ಮಹಿಳೆಯರ ಸುರಕ್ಷತೆಗೆ ಅಲ್ಲ. ಕಣ್ಣು ತೆರೆಯಿರಿ ರಾಹುಲ್, ಎಂದು ಕೇಂದ್ರ ಕಲ್ಲಿದ್ದಿಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹಿಂಸಾಚಾರ ಮತ್ತು ಕಿರುಕುಳ ಮುಂದುವರೆದಿದೆ. ಮಹಿಳೆಯರ ರಕ್ಷಣೆ ಮಾಡದ ಕಾಂಗ್ರೆಸ್ ಸರ್ಕಾರಗಳು ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂಬುವುದಾಗಿ ಗುಡುಗಿದ್ದಾರೆ.
ಅಲ್ಪಸಂಖ್ಯಾತರ ಓಲೈಕೆ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆದಿವಾಸಿ ಮಹಿಳೆಗೆ ನ್ಯಾಯ ಕೊಡಿಸುವ ಆಲೋಚನೆ ರಾಹುಲ್ಗೆ ಏಕೆ ಆಗುತ್ತಿಲ್ಲ? ಅತ್ಯಾಚಾರ ಎಸಗಿದ ಆಟೋ ಚಾಲಕ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ರಾಹುಲ್ ಮತ್ತು ಕಾಂಗ್ರೆಸ್ ಈ ಘಟನೆಯನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.