ಚೆನ್ನೈ, ಸೆ.8 (DaijiworldNews/TA): ಪಿಹೆಚ್ಡಿ ಮಾಡುತ್ತಲೇ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ತಮಿಳುನಾಡಿನ ವಿದ್ಯಾರ್ಥಿಯ ವೀಡಿಯೋ ಈಗ ವೈರಲ್ ಆಗಿದೆ.
ಒಂದೆಡೆ ಪಿಎಚ್ಡಿ ವಿದ್ಯಾಭ್ಯಾಸ ಮತ್ತೊಂದೆಡೆ ಕುಟುಂಬಕ್ಕೆ ನೆರವಾಗಲು ಪಾರ್ಟ್ಟೈಂ ಕೆಲಸ. ಸದ್ಯ ತಮಿಳುನಾಡಿನ ಬೀದಿ ಬದಿ ವ್ಯಾಪಾರಿ ತರುಲ್ ರಾಯನ್ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕ್ರಿಸ್ಟೋಫರ್ ಲೂಯಿಸ್ ಎಂಬ ವ್ಲಾಗರ್ ಅವರು ತಮಿಳುನಾಡಿನಲ್ಲಿ ಸಂಚರಿಸುತ್ತಿರುವ ಸಂಧರ್ಭ ಅವರು ಚೆನ್ನೈನಲ್ಲಿ ಬೀದಿ ಆಹಾರ ಮಾರಾಟಗಾರ ತರುಲ್ ರಾಯನ್ ಅವರನ್ನು ಭೇಟಿಯಾದರು. ನಾನ್-ವೆಜ್ ಸ್ಟ್ರೀಟ್ ಫುಡ್ ಅನ್ನು ಸವಿಯಲು ಹುಡುಕಾಟದಲ್ಲಿರುವಾಗ, ಆ ಹುಡುಕಾಟ ಕೆಲಸದ ಜೊತೆಗೆ ತಮ್ಮ ಶಿಕ್ಷಣವನ್ನು ಮುಂದುವರಿಸುವ ರಾಯನ್ನ ಸ್ಪೂರ್ತಿದಾಯಕ ಕಥನ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಲು ಕಾರಣವಾಯಿತು.
ಅಮೆರಿಕದ ವ್ಲಾಗರ್ ಶೇರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ತಾರುಲ್ ರಾಯನ್ ಅವರು ಜೈವಿಕ ತಂತ್ರಜ್ಞಾನದಲ್ಲಿ ಪಿಹೆಚ್ಡಿ ಕುರಿತು ಲೆವಿಸ್ಗೆ ವಿವರಿಸುವುದನ್ನು ಕೇಳಬಹುದು. ತಾನು ಎಸ್ಆರ್ಎಂ ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಮಾಡುತ್ತಿದ್ದೇನೆ ಎಂದು ರಾಯನ್ ಹೇಳಿದ್ದಾರೆ. ಕೆಲವು ಸೆಕೆಂಡುಗಳ ನಂತರ, ವ್ಲಾಗರ್ ಮಾರಾಟಗಾರರ ಹೆಸರು ಮತ್ತು ಕಾಲೇಜಿಗಾಗಿ ಸಣ್ಣ ಗೂಗಲ್ ಹುಡುಕಾಟವನ್ನು ಮಾಡಿದರು ಮತ್ತು ರಾಯನ್ ಅವರು ಬರೆದ ಅನೇಕ ಸಂಶೋಧನಾ ಲೇಖನಗಳನ್ನು ಕಂಡು ಶಾಕ್ ಆದರು.
ಈ ವೀಡಿಯೊವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಅನೇಕ ಯುವಕರಿಗೆ ರಾಯನ್ ಪ್ರೇರಣೆ ಎಂದು ಶ್ಲಾಘಿಸಿದರು. "ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸಿ ಅಲ್ಲಿ ಅನೇಕ ಉತ್ತಮ ರತ್ನಗಳಿವೆ, ”ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ನಲ್ಲಿ ಕಾಮೆಂಟ್ ಕೂಡಾ ಮಾಡಿದ್ದಾರೆ.