ರಾಜಸ್ಥಾನ, ಸೆ.10(DaijiworldNews/AK): ಸಾಧಿಸುವ ಛಲವಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು. ಸಾಧನೆಗೆ ನಮ್ಮ ವಯಸ್ಸು ಕೂಡ ಅಡ್ಡಿಯಾಗುವುದಿಲ್ಲ. ಹೇಗೆ 21 ನೇ ವಯಸ್ಸಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿಯನ್ನು ಭೇದಿಸಿದ ಐಎಫ್ಎಸ್ ಅಧಿಕಾರಿಯಾರಿಯಾದ ವಿದುಷಿ ಸಿಂಗ್ ಅವರ ಸ್ಫೂರ್ತಿದಾಯಕ ಕತೆ ಇದು.
ವಿದುಷಿ ಅವರು ರಾಜಸ್ಥಾನದ ಜೋಧಪುರ ಮೂಲದವರಾಗಿದ್ದು, ಅವರು ಅಯೋಧ್ಯೆಯಲ್ಲಿ ವಾಸವಾಗಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ೨೦೨೧ ರಲ್ಲಿ ಬಿಎ ಆನರ್ಸ್ (ಅರ್ಥಶಾಸ್ತ್ರ) ಪದವಿ ಪಡೆದ ನಂತರ, ಅವರು ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಾರೆ. ಅವರು ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಕಾಲೇಜಿನಲ್ಲಿ ಓದುವಾಗ ಸ್ವಯಂ ಅಧ್ಯಯನ ಮಾಡುತ್ತಾರೆ.
ವಿದುಷಿ ಅವರು ತನ್ನ ಪದವಿಯ ಸಮಯದಲ್ಲಿ, ಯುಪಿಎಸ್ಸಿ ಪರೀಕ್ಷೆಯ ತಯಾರಿಗಾಗಿ ಎನ್ಸಿಇಆರ್ಟಿಗಳು ಮತ್ತು ಇತರ ಮೂಲಭೂತ ಪುಸ್ತಕಗಳನ್ನು ಓದುತ್ತಾರೆ. ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 13ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ.
ವಿದುಷಿ ಅವರು ಉನ್ನತ ಶ್ರೇಣಿಯನ್ನು ಹೊಂದಿದ್ದರೂ, ಅವರು ಐಎಎಸ್ ಬದಲಿಗೆ ಐಎಫ್ಎಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೂಲಕ 21ನೇ ವಯಸ್ಸಿಗೆ ಐಎಫ್ಎಸ್ ಅಧಿಕಾರಿಯಾಗುವಲ್ಲಿ ಅವರು ಯಶಸ್ವಿಯಾಗುತ್ತಾರೆ.