ಬೆಂಗಳೂರು, ಮೇ 27 (Daijiworld News/SM): ಇತ್ತೀಚೆಗೆ ಪ್ರಕಟಗೊಂಡ ಲೋಕಸಭಾ ಫಲಿತಾಂಶ ಎಲ್ಲರಿಗೂ ಅಚ್ಚರಿಗೆ ಕಾರಣವಾಗಿದೆ. ರಾಜ್ಯದ ಘಟಾನುಘಟಿ ನಾಯಕರ ಸೋಲು ಆಘಾತವನ್ನುಂಟುಮಾಡಿದೆ. ಈ ನಡುವೆ ಇದೀಗ ಜೆಡಿಎಸ್ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿದೆ.
ದೇವೇಗೌಡ ಅವರು ತುಮಕೂರು ಲೋಕಸಭೆ ಚುನಾವಣೆಯಲ್ಲಿ ಸೋಲಲು ಅವರ ಇಬ್ಬರು ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರೇ ಕಾರಣ ಎಂದು ತುಮಕೂರಿನ ಯುವ ಕಾಂಗ್ರೆಸ್ ಮುಖಂಡ ಆರೋಪಿಸಿದ್ದಾರೆ.
ಮೈತ್ರಿ ಸರಕಾರದಿಂದಲೇ ದೇವೇಗೌಡರು ಸೋಲಬೇಕಾಯಿತು ಎಂದ ಚನ್ನಿಗಪ್ಪ, ದೇವೇಗೌಡ ಅವರ ಸೊಸೆಯಂದಿರು ತಮ್ಮ ಮಕ್ಕಳಿಗೆ ಚುನಾವಣೆ ಟಿಕೆಟ್ ಬೇಕೆಂದು ಹಠ ಹಿಡಿದಿದ್ದರು. ಇದರಿಂದ ದೇವೇಗೌಡ ಸ್ವಕ್ಷೇತ್ರವನ್ನು ಅನಿವಾರ್ಯವಾಗಿ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಯಿತು. ಇದೇ ಕಾರಣದಿಂದ ತುಮಕೂರು ಕ್ಷೇತ್ರದಿಂದ ಅವರು ಸ್ಪರ್ಧಿಸಿ ಸೋಲನುಭವಿಸಬೇಕಾಯಿತು ಎಂದಿದ್ದಾರೆ.
ಇನ್ನು ಹಿರಿಯ ಗೌಡರು ನಿರಂತರ ಗೆಲುವು ದಾಖಲಿಸುತ್ತಿದ್ದರು. ಆದರೆ, ಈ ಬಾರಿ ರಾಜ್ಯದಲ್ಲಿ ಮೈತ್ರಿ ಸರಕಾರ ಆಡಳಿತದಲ್ಲಿರುವ ಕಾರಣ ಟಿಕೆಟ್ ಸಿಗುವುದು ಸುಲಭವಾಗಿತ್ತು. ಇದರಿಂದಲೇ ದೇವೇಗೌಡರ ಸೊಸೆಯಂದಿರು ಹಠಹಿಡಿದ ಪರಿಣಾಮ ದೇವೇಗೌಡರು ಅಸ್ಥಿತ್ವ ಕಳೆದುಕೊಂಡರು ಎಂದು ಆರೋಪಿಸಿದ್ದಾರೆ.