ಮಂಡ್ಯ, ಸೆ.12 (DaijiworldNews/AK): ನಾಗಮಂಗಲ ಗಲಭೆ ಪೂರ್ವಯೋಜಿತ ಎಂದರಲ್ಲದೆ, ಸನ್ಮಾನ್ಯ ಗೃಹಸಚಿವರು ಸಂಘಟನೆ ಎಂದು ಹೇಳುವುದಾದರೆ ಪೆಟ್ರೋಲ್ ಬಾಂಬ್ ಹಾಕುವುದು ಸಂಘಟನೆಯೇ? ಕೋಟ್ಯಂತರ ರೂಪಾಯಿಯ ಅಂಗಡಿಗಳನ್ನು ಸುಟ್ಟು ಹಾಕುವುದು ಸಂಘಟನೆಯೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಪ್ರಶ್ನಿಸಿದರು.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಯಿಸಿದ, ಅವರು, ಯಾವ ಆಧಾರದಲ್ಲಿ ಇದನ್ನು ಸಂಘಟನೆ ಎನ್ನುತ್ತೀರಿ ಎಂದು ಕೇಳಿದರು.ಮೆರವಣಿಗೆ ಮೇಲೆ ಕಲ್ಲು ತೂರುವುದು ಸಂಘಟನೆಯೇ? ಗಲಭೆ ಮಾಡಿದವರನ್ನು ಬಂಧಿಸಿ. ಹಿಂದೂಗಳನ್ನು ಬಂಧಿಸ್ತೇವೆ; ಮುಸ್ಲಿಮರನ್ನೂ ಬಂಧಿಸುವುದಾಗಿ ಖಾಜಿ ನ್ಯಾಯ ಮಾಡಬೇಡಿ ಎಂದು ಅವರು ಆಗ್ರಹಿಸಿದರು.
ಕಲ್ಲು ತೂರಿದವರು, ಮೆರವಣಿಗೆ ತಡೆದವರು, ಬೆಂಕಿ ಹಾಕಿದವರ ಮೇಲಷ್ಟೇ ಕೇಸು ಹಾಕಿ ಬಂಧಿಸಬೇಕು. ಗಣೇಶೋತ್ಸವದ ಸಂಘಟಕರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆದು ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ನಿಮ್ಮದು ತಾಲಿಬಾನಿಗಳ ಸರಕಾರ; ತಾಲಿಬಾನಿಗಳನ್ನೇ ಬೆಂಬಲಿಸುವುದಾಗಿ ಹೇಳಿ. ಆಗ ನಾವು ನಮ್ಮ ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಮಾಜಿ ಸಚಿವ ನಾರಾಯಣ ಗೌಡ, ಮಾಜಿ ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ, ರಾಜ್ಯ ಕಾರ್ಯದರ್ಶಿ ಶರಣ್ ತಳ್ಳಿಕೆರೆ, ಜಿಲ್ಲಾಧ್ಯಕ್ಷ, ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.