ನವದೆಹಲಿ, ಸೆ.13 (DaijiworldNews/AK): ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಪಡೆದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈ ಲಿನಿಂದ ಬಿಡುಗಡೆಯಾದರು.
ದೆಹಲಿಯ ತಿಹಾರ್ ಜೈಲಿನ ಹೊರಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಘೋಷಣೆ ಮೊಳಗಿಸಿ ಹರ್ಷ ವ್ಯಕ್ತಪಡಿಸಿದರು. ಕೇಜ್ರಿವಾಲ್ ಪರ ಜಯಘೋಷಗಳು ಮೊಳಗಿದವು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸುರಿವ ಮಳೆಯನ್ನು ಲೆಕ್ಕಿಸದೇ ಸೇರಿದ್ದ ನೂರಾರು ಜನ ಕೇಜ್ರಿವಾಲ್ ಜಿಂದಾಬಾದ್ ಎಂದು ಘೋ ಷಣೆ ಕೂಗಿದರು. ಕೈಯಲ್ಲಿ ಕೇಜ್ರಿವಾಲ್ ಹಾಗೂ ಬಾಬಾ ಸಾಹೆಬ್
ಅಂಬೇ ಡ್ಕರ್ ಅವರ ಭಾವ ಚಿತ್ರ ಹಿಡಿದುಕೊಂಡು ಹರ್ಷ ವ್ಯಕ್ತಪಡಿಸಿದರು.
ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಕ್ರೇಜಿವಾಲ್ , ನನ್ನ ಜೀವ ದೇಶಕ್ಕಾಗಿ ಸಮರ್ಪಿತವಾಗಿದೆ. ನನ್ನ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದ್ದೇನೆ.ನಾನು ಸತ್ಯ ಹಾಗೂ ಪ್ರಾಮಾಣಿಕತೆಯಿಂದ ಇದ್ದಿದ್ದರಿಂದ ದೇವರು ಪ್ರತಿಹೆಜ್ಜೆಯಲ್ಲಿ ನನಗೆ ಬೆಂಬಲಿಸಿದ್ದಾನೆ ಎಂದು ಹೇಳಿದರು.