ನವದೆಹಲಿ, ಸೆ.17 (DaijiworldNews/TA):ಭಾರತದಲ್ಲಿ ಬುಲ್ಡೋಜರ್ ನ್ಯಾಯಕ್ಕೆ ಅಕ್ಟೋಬರ್ 1ರ ವರೆಗೆ ಸುಪ್ರೀಂ ತಡೆ ತಂದಿದೆ. ಎಲ್ಲೆಂದರಲ್ಲಿ ಖಾಸಗಿ ಆಸ್ತಿಯನ್ನು ಅನಧಿಕೃತವಾಗಿ ಉರುಳಿಸುವುದನ್ನು ಸುಪ್ರೀಂ ನಿಗದಿತ ಸಮಯದ ವರೆಗೆ ನಿಲ್ಲಿಸುವಂತೆ ಆದೇಶ ನೀಡಿದೆ. ಒಂದು ವೇಳೆ ಅಕ್ರಮ ಧ್ವಂಸ ಪ್ರಕರಣವಿದ್ದರೂ ಅದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿ ಈ ತೀರ್ಮಾನ ಕೈಗೊಂಡಿದೆ. ಬುಲ್ಡೋಜರ್ ಕಾರ್ಯಾಚರಣೆ ಕ್ರಮವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಕ್ರಮ ಉತ್ತಮ ಎಂದು ಘಂಟಾಘೋಷವಾಗಿ ಆಸ್ತಿ ಉರುಳಿಸುವವರ ವಿರುದ್ಧ ಕೋರ್ಟ್ ಎಚ್ಚರಿಕೆ ಸಂದೇಶ ರವಾನಿಸಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ದಿನಾಂಕದ ವರೆಗೆ ಯಾವುದೇ ಕಾರ್ಯಾಚರಣೆ ನಡೆಸದಂತೆ ಸೂಚನೆ ನೀಡಿದೆ.
ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರೆ ತೆರವು ಮಾಡಲು ಅವಕಾಶ ನೀಡಲಾಗುವುದು, ನಿಯಮದಂತೆ ಅನುಮತಿ ಪಡೆದು ಒತ್ತುವರಿ ತೆರವಿಗೆ ಅವಕಾಶ ನೀಡಲಾಗುವುದು ಎಂಬುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.