ಹರಿಯಾಣ, ಸೆ.18(DaijiworldNews/AA):ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಭೇದಿಸಿ ಐಪಿಎಸ್ ಅಧಿಕಾರಿಯಾದ ಹಾಗೂ ಎರಡನೇ ಬಾರಿ ಯುಪಿಎಸ್ಸಿ ಪರೀಕ್ಷೆ ಭೇದಿಸಿ ಐಎಎಸ್ ಅಧಿಕಾರಿಯಾದ ದಿವ್ಯಾ ಮಿತ್ತಲ್ ಅವರ ಯಶೋಗಾಥೆ ಇದು.
ರೇವಾರಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ಹರಿಯಾಣ ಮೂಲದವರು. ದೆಹಲಿಯ ಹೆಸರಾಂತ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದಳು. ನಂತರ ಐಐಎಂ ಬೆಂಗಳೂರಿನಿಂದ ಎಂಬಿಎ ವ್ಯಾಸಂಗ ಮಾಡಿದರು. ನಂತರ ಲಂಡನ್ನಲ್ಲಿ ಆಕೆಗೆ ಉತ್ತಮ ಸಂಬಳದ ಕೆಲಸ ದೊರೆಯುತ್ತದೆ. ಆದರೆ ಅವರು ತಮ್ಮ ಯುಪಿಎಸ್ಸಿ ಕನಸನ್ನು ನನಸಾಗಿಸಿಕೊಳ್ಳಲು ಆ ಕೆಲಸವನ್ನು ತೊರೆದು, ಪತಿ ಗಗನ್ ದೀಪ್ ಸಿಂಗ್ ಜೊತೆಗೆ ಭಾರತಕ್ಕೆ ಸ್ಥಳಾಂತರಗೊಂಡರು.
ನ೦ತರ ದಿವ್ಯಾ ಮಿತ್ತಲ್ ಕೋಚಿಂಗ್ ಇಲ್ಲದೆಯೇ ಮೊದಲ ಪ್ರಯತ್ನದಲ್ಲೇ ಯುಪಿಎಸ್ ತೇರ್ಗಡೆಯಾಗಿ ಐಪಿಎಸ್ ಅಧಿಕಾರಿಯಾದರು. ಬಳಿಕ, ತನ್ನ ಎರಡನೇ ಪ್ರಯತ್ನದಲ್ಲಿ, ಅವರು 2012 ಯುಪಿಎಸ್ಸಿ ಸಿಎಸ್ಸಿ ನಲ್ಲಿ 68 ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.
ಈ ಹಿಂದೆ ಉತ್ತರ ಪ್ರದೇಶದ ಮಿರ್ಜಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಗಿ ನೇಮಕಗೊಂಡಿದ್ದ ದಿವ್ಯಾ ಪ್ರಸ್ತುತ ಸಂತ ಕಬೀರ್ ನಗರ ಜಿಲ್ಲೆಯ ಡಿಎಂ ಆಗಿದ್ದಾರೆ. ಆಕೆಯ ಪತಿ ಗಗನ್ ದೀಪ್ ಸಿಂಗ್ ಕೂಡ ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಿದ್ದು, ಕಾನ್ಪುರದಲ್ಲಿ ಐಎಎಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.