ಮಹಾರಾಷ್ಟ್ರ, ಸೆ.20(DaijiworldNews/AA): ಇಂದಿನ ಕಾಂಗ್ರೆಸ್ನಲ್ಲಿ ದೇಶಪ್ರೇಮದ ಸ್ಫೂರ್ತಿ ಸತ್ತು ಹೋಗಿದೆ. ಇಂದಿನ ಕಾಂಗ್ರೆಸ್ನಲ್ಲಿ ದ್ವೇಷದ ದೆವ್ವ ಪ್ರವೇಶಿಸಿದೆ. ಕಾಂಗ್ರೆಸ್ ನವರ ಪರಭಾಷೆಯ ಭಾಷೆ ನೋಡಿ ಅವರ ದೇಶವಿರೋಧಿ ಅಜೆಂಡಾ, ಸಮಾಜ ಒಡೆಯುವ, ದೇಶದ ಸಂಸ್ಕೃತಿಗೆ ಅವಮಾನ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಇತ್ತೀಚೆಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಮೇರಿಕಾದಲ್ಲಿ ಮಾಡಿದ ಭಾಷಣದ ಕುರಿತು ಟೀಕಿಸಿರುವ ಅವರು, ರಾಹುಲ್ ಗಾಂಧಿ ತನ್ನ ವಿದೇಶಿ ಭೇಟಿಯ ಸಮಯದಲ್ಲಿ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕಾಂಗ್ರೆಸ್ ಪಕ್ಷವು ಗಣೇಶನನ್ನು ಪೋಲೀಸ್ ವ್ಯಾನ್ನಲ್ಲಿ ಕೂರಿಸುವ ಧೈರ್ಯವನ್ನು ಮಾಡಿದೆ. ಇದು ತುಷ್ಟೀಕರಣದ ರಾಜಕೀಯಕ್ಕೆ ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಪೊಲೀಸ್ ವ್ಯಾನ್ನಲ್ಲಿ ಗಣೇಶ ಮೂರ್ತಿಯನ್ನು ತೋರಿಸುವ ವೈರಲ್ ಫೋಟೋಗೆ ಇದು ಸ್ಪಷ್ಟ ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಎಂದರೆ ಸುಳ್ಳು, ವಂಚನೆ ಮತ್ತು ಅಪ್ರಾಮಾಣಿಕತೆ. ತೆಲಂಗಾಣದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ರೈತರು ಸಾಲ ಮನ್ನಾ ಮಾಡಲು ಅಲೆದಾಡುತ್ತಿದ್ದಾರೆ. ಇಂದು ಅದೇ ಹಳೆಯ ಕಾಂಗ್ರೆಸ್ ಅಲ್ಲ. ದೇಶದಲ್ಲಿ ಯಾವುದೇ ಅತ್ಯಂತ ಭ್ರಷ್ಟ ಕುಟುಂಬವಿದ್ದರೆ ಅದು ಕಾಂಗ್ರೆಸ್ನ ರಾಜಮನೆತನವಾಗಿದೆ ಎಂದರು.