ಕೊಪ್ಪಳ, ಸೆ.22(DaijiworldNews/AK): ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಅಳವಡಿಸುವ ಕುರಿತು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೊತೆ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಒಂದು ವರ್ಷದ ಒಳಗೆ ಹೊಸ ಗೇಟ್ ಗಳನ್ನು ಅಳವಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರಾದ, ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ನಲ್ಲಿ ಭಾನುವಾರ ನಡೆದ ಗೇ ಟ್ ದುರಸ್ತಿಗೆ ಶ್ರಮಿಸಿದ ಅಧಿಕಾರಿಗಳು,
ಕಾರ್ಮಿ ಕರಿಗೆ ಹಮ್ಮಿಕೊಂ ಡಿದ್ದ ಸನ್ಮಾನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿ, ಜಲಾಶಯದ ಗೇಟ್ ಕೊಚ್ಚಿ ಹೋದಾಗ ಬಿಜೆಪಿಯವರು ಅನೇಕ ಟೀಕೆ ಮಾಡಿದರು. ಈಗ ಟೀಕೆಗಳು ಸತ್ತು ಹೋಗಿದ್ದು, ನಮ್ಮ ಕೆಲಸ ಮಾತ್ರ ಉಳಿದುಕೊಂಡಿದೆ ಎಂದರು.
ಬದಲಾವಣೆಮಾಡಬೇ ಕು ಎಂ ದು ಕೇಂ ದ್ರದ ತನಿಖಾ ತಂ ಡ ವರದಿ ಕೊಟ್ಟಿದ್ದು ಅದರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು