ಬಳ್ಳಾರಿ, ಸೆ.22(DaijiworldNews/AA): ಕಳೆದ 15 ದಿನಗಳಲ್ಲಿ 350 ಟನ್ ನಂದಿನಿ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗಿದೆ. ಎರಡು ಸಾವಿರ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು. ಪೂರೈಕೆಗೆ ನಾವು ಸನ್ನದ್ದರಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರದಿಂದಾಗಿ ಮತ್ತೆ ಕರ್ನಾಟಕದ ನಂದಿನಿ ತುಪ್ಪಕ್ಕೆ ಟಿಡಿಯಿಂದ ಬೇಡಿಕೆ ಬಂದಿದೆ. ತುಪ್ಪ ತುಂಬಿದ ಟ್ಯಾಂಕರ್ಗೆ ಜಿಪಿಎಸ್ ಅಳವಡಿಕೆ ಮಾಡಿ ಕಳುಹಿಸಿಲು ನಿರ್ಧರಿಸಿದ್ದು, ತುಪ್ಪ ತುಂಬಿ ಹೊರಟಾಗ ಯಾವುದೇ ರೀತಿಯ ಕಲಬರಕೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ತಿರುಪತಿ ಮುಟ್ಟಿದ ಕೂಡಲೇ ಒಟಿಪಿ ನೀಡಿದ ಬಳಿಕ ಟ್ಯಾಂಕರ್ ಓಪನ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.