ಬೆಂಗಳೂರು, ಸೆ.23(DaijiworldNews/AA): ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ ಪುತ್ರನಿಗೆ ಮುನಿರತ್ನ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆ ಮಾಜಿ ಕಾರ್ಪೊರೇಟರ್ ವೇಲು ನಾಯಕ್ ಹಾಗೂ ದಲಿತ ಸಂಘಟನೆ ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ.
ಸಿಎಂ ಭೇಟಿ ಮಾಡಿದ ವೇಲು ನಾಯಕ್ ಹಾಗೂ ದಲಿತ ಸಂಘಟನೆ ಮುಖಂಡರು ದೂರು ನೀಡಿದ್ದವರಿಗೆ ಹಾಗೂ ನಮಗೆ ಜೀವ ಬೆದರಿಕೆ ಕರೆ ಬರುತ್ತಿವೆ. ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ನಮಗೆ ತೊಂದರೆ ಕೊಡುತ್ತಿದ್ದಾರೆ. ಮುನಿರತ್ನ ಆಪ್ತ ಹೆಬ್ಬಗೂಡಿ ಠಾಣೆ ಐ.ಎನ್.ರೆಡ್ಡಿ ಸಸ್ಪೆಂಡ್ ಮಾಡುವಂತೆಯೂ ಮನವಿ ಮಾಡಿದ್ದಾರೆ.
ಸಿಎಂ ಭೇಟಿದ ಬಳಿಕ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ವೇಲು ನಾಯಕ್ ಅವರು, ಹೆಬ್ಬಗೋಡಿ ಠಾಣೆ ಪಿಐ ಐಎನ್ ರೆಡ್ಡಿ ಸಾಕ್ಷಿನಾಶಕ್ಕೆ ಮುಂದಾಗುತ್ತಿದ್ದಾರೆ. ಮುನಿರತ್ನ ನಾಯ್ಡುಗೆ ಐಎನ್ ರೆಡ್ಡಿಯಿಂದ ವಿರೋಧಿಗಳ ಫೋನ್ ಟ್ಯಾಪ್ನಿಂದ ಹಿಡಿದು ಎಲ್ಲಾ ರೀತಿಯ ಸಹಾಯ ಮಾಡಿದ್ದಾನೆ. ಸಾಕ್ಷಿ ನಾಶಪಡಿಸುವವರಲ್ಲಿ ಇನ್ಸ್ಪೆಕ್ಟರ್ ಐ.ಎನ್.ರೆಡ್ಡಿ ಪ್ರಮುಖರು. ಹೀಗಾಗಿ ಅವರನ್ನು ಅಮಾನತು ಮಾಡಬೇಕು. ಜೊತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.