ಶ್ರೀನಗರ, ಸೆ.23(DaijiworldNews/AA): ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಅವರ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ಬಿಜೆಪಿ, ಆರ್ಎಸ್ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಲಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಕಳೆದ 3 ಚುನಾವಣೆಗಳಲ್ಲಿ ರಾಹುಲ್ ಗಾಂಧಿಯವರ ಪಕ್ಷದ ಒಟ್ಟು ಮೊತ್ತವು 2024ರ ಲೋಕಸಭೆಯೊಂದರ ಬಿಜೆಪಿಯ ಲೆಕ್ಕಾಚಾರವನ್ನು ದಾಟಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ಮತ್ತು ಮೋದಿಗೆ ರಾಹುಲ್ ಗಾಂಧಿ ಅವರ ಪ್ರಮಾಣಪತ್ರಗಳ ಅಗತ್ಯವಿಲ್ಲ. ಏಕೆಂದರೆ ಭಾರತದ ಜನರು ಮೋದಿಯ ಈ ಹಿಂದಿನ ಕೆಲಸ ಮತ್ತು ಆಡಳಿತದಿಂದ ಸಂತುಷ್ಟರಾಗಿದ್ದಾರೆ. ಅದೇ ಕಾರಣಕ್ಕೆ ಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದುವರೆದು ಕಾಂಗ್ರೆಸ್ ಪಕ್ಷದ ಮಿತ್ರನಾದ ಒಮರ್ ಅಬ್ದುಲ್ಲಾ ಅವರು 2 ಸ್ಥಾನಗಳಿಂದ ಸ್ಪರ್ಧಿಸಲು ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಹೊಂದಿಲ್ಲ. ಇಡೀ ಜಗತ್ತಿಗೆ ಭಾರತದ ಸಾಮರ್ಥ್ಯ ಮತ್ತು ಪ್ರಧಾನಿ ಮೋದಿಯವರ ಆಡಳಿತದ ಮೇಲೆ ವಿಶ್ವಾಸವಿದೆ. ಪ್ರಧಾನಿ ಮೋದಿಯವರ ಇತ್ತೀಚಿನ ಯುಎಸ್ ಪ್ರವಾಸದಲ್ಲಿ, ಅಮೆರಿಕಾದ ಭದ್ರತಾ ಮೂಲಸೌಕರ್ಯ ಮತ್ತು ಯುಎಸ್ ಮಿತ್ರರಾಷ್ಟ್ರಗಳಿಗೆ ಚಿಪ್ ಗಳನ್ನು ಪೂರೈಸಲು ಭಾರತದ ಮೇಲೆ ನಂಬಿಕೆಯಿಟ್ಟಿದೆ ಎಂದಿದ್ದಾರೆ.