ಮಹಾರಾಷ್ಟ್ರ,ಸೆ.27(DaijiworldNews/TA):ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆಪ್ತರ ಮುಂದೆ ಅಜಿತ್ ಪವಾರ್ ಅಸಮಾಧಾನದ ಮಾತುಗಳನ್ನಾಡಿದ್ದಾರೆ.
ಚಂದಗಢದಲ್ಲಿ ಕಾರ್ಯಕ್ರಮ ಮುಗಿಸಿ ಬೆಳಗಾವಿ ಸಾಂಬ್ರಾಗೆ ಆಗಮಿಸಿದ್ದ ಡಿಸಿಎಂ ಅಜಿತ್ ಪವಾರ್ ಅವರನ್ನು ಸಾಂಬ್ರಾದಲ್ಲಿ ಚಂದಗಢ ತಾಲೂಕು ಮುಖಂಡರು ಭೇಟಿಯಾಗಿದ್ದರು. ಚಂದಗಢ ತಾಲೂಕು ಅಭಿವೃದ್ಧಿ ಮಾಡುವಂತೆ ಮನವಿ ನೀಡಿದ ಮುಖಂಡರ ಬಳಿ ಅಜಿತ್ ಪವಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಚಂದಗಢ ಜಿಲ್ಲೆಗೆ ಭೇಟಿ ನೀಡಿದ್ದ ಡಿಸಿಎಂ ಅಜಿತ್ ಪವಾರ್ ಮುಂಬೈನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಚಂದಗಢಕ್ಕೆ ತೆರಳಿದ್ದರು. ಈ ವೇಳೆ ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.