ಬೆಂಗಳೂರು, ಅ. 03(DaijiworldNews/TA):ನವ ಕರ್ನಾಟಕ ರತ್ನ ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅ. 4 ಮತ್ತು 5ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಾಡು ನುಡಿ ಕಲೆ ಮತ್ತು. ಸಾಂಸ್ಕೃತಿಕ ಕ್ಷೇತ್ರದಲ್ಲಿ, ಸಂಘಟನ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ನವ ಕರ್ನಾಟಕ ರತ್ನ “ ಪ್ರಶಸ್ತಿ ಗೌರವ ಪುರಸ್ಕಾರಕ್ಕೆ ಸತೀಶ್ ಕುಮಾರ್ ಬಜಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಆಶಕ್ತರ ಪಾಲಿಗೆ ಆಸರೆಯಾಗುವ ಏಕೈಕ ವ್ಯಕ್ತಿ -ಸದಾ ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುವವರು.ಸೌದಿ ಅರೇಬಿಯಾದ ದಮ್ಮಮ್ ನಲ್ಲಿ 24*7 ಲಭ್ಯವಾಗುವ , ಅರಬ್ ರಾಷ್ಟ್ರ ಗಳಲ್ಲಿ ತೊಂದರೆಗೆ ಸಿಲುಕಿದ ಅನಿವಾಸಿ ಭಾರತೀಯರಿಗೆ ಮಿಡಿಯುವ ಹೃದಯ , ಅನಾರೋಗ್ಯ ಪೀಡಿತ ಅಸಹಾಕರಿಗೆ ಚಿಕಿತ್ಸೆ ಗೆ ಸ್ಪಂದಿಸುವ , ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಜಾತಿ ಮತ ಭೇದವಿಲ್ಲದೆ ಸ್ಪಂದಿಸುವ ಮೂಲಕ ಜನಮನ ಗೆದ್ದಿರುವ ಸತೀಶ್ ಕುಮಾರ್ ಬಜಾಲ್ ಅವರ ಸಾಮಾಜ ಮುಖಿ ಕಾರ್ಯಕ್ಕೆ ಈ ಪುರಸ್ಕಾರ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ಯುವಕ ಮಂಡಲದ ಮೂಲಕ ತನ್ನ ಹುಟ್ಟೂರಿಗೆ ಉಚಿತವಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು ಇವರ ಸೇವೆಗೆ ಮತ್ತೊಂದು ಸಾಕ್ಷಿಯಾಗಿದೆ.
ಸೌದಿ ಅರೇಬಿಯಾದ ಇತಿಹಾಸದಲ್ಲಿ ಪ್ರಥಮ ಭಾರಿಗೆ ತುಳು ಚಲನಚಿತ್ರ ಬಿಡುಗಡೆ ಮತ್ತು ಪ್ರೀಮಿಯರ್ ಶೋ. ಮಾಡಿ ಚರಿತ್ರೆ ನಿರ್ಮಿಸಿದ ಕೀರ್ತಿ ಕೂಡ ಇವರದ್ದು. ಸೌದಿ ಹವ್ಯಾಸಿ ಕಲಾವಿದರನ್ನು ಒಟ್ಟುಸೇರಿಸಿ ಬಹರೇನಲ್ಲಿ ಕನ್ನಡ ಸಂಘ ಬಹರೇನ್ ಇದರ ಸಹಕಾರದೋಂದಿಗೆ ಸಂಪೂರ್ಣ ದೇವಿ ಮಹಾತ್ಮೆ ,ಅಸುರ ವಧೆ ಯಕ್ಷಗಾನ ಪ್ರದರ್ಶನ ಮಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಇವರು ಕೈಟಪ ಪಾತ್ರ ಕೂಡ ಮಾಡಿ ಮೆಚ್ಚುಗೆ ಗಳಿಸಿದ್ದರು.
ಸೌದಿ ಅರೇಬಿಯಾ ದಮ್ಮಾಮ್ ನಲ್ಲಿ ಇತಿಹಾಸ ಸೃಷ್ಟಿಸಿದ 17 ನೇ ವಿಶ್ವ ಕನ್ನಡ ಸಮ್ಮೇಳನ ವನ್ನು ಆಯೋಜಿಸಿ ನಮ್ಮ ಜಿಲ್ಲೆ ಹಾಗೂ ರಾಜ್ಯದ ಸಂಸ್ಕತಿಯನ್ನು , ಕಲೆಯನ್ನು ಪಸರಿಸಿದ ಹಾಗೂ ಅದರ ಸ್ವಾಗತ ಸಮಿತಿ ಅದ್ಯಕ್ಷರಾಗಿ ಯಶಸ್ವಿಗೊಳಿಸಿದ ಕೀರ್ತಿ ಕೂಡಾ ಅವರದ್ದಾಗಿದೆ. ಅಂದು ಕಾರ್ಯಕ್ರಮದಲ್ಲಿ ಅವರನ್ನು “ವಿಶ್ವ ಮಾನ್ಯ” ಪ್ರಶಸ್ತಿ 2024 ಪುರಸ್ಕಾರ ನೀಡಿ ವಿಶ್ವ ಕನ್ನಡ ಸಂಸ್ಕತಿ ಸಂಸ್ಥೆ ಯು , ಸಮ್ಮೇಳನದಲ್ಲಿ ಗೌರವಿಸಿತ್ತು.
ಸಮಾಜ ಸೇವೆ ಮತ್ತು ಸಾಂಸ್ಕೃತಿಕ ರಂಗಕ್ಕೆನೀಡಿದ ಸೇವೆಯನ್ನು ಗುರುತಿಸಿ 2024 ರ ಸಾಲಿನ 49 ನೇಯ ವಾರ್ಷಿಕ ‘ಆರ್ಯಭಟ ಅಂತರ್ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಗಿತ್ತು. ಈ ಬಾರಿ ನವ ಕರ್ನಾಟಕ ರತ್ನ ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಅವರನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.