ನವದೆಹಲಿ, ಅ.04(DaijiworldNews/TA):ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಅಕ್ಟೋಬರ್ 7 ರಂದು ದ್ವಿಪಕ್ಷೀಯ ಪ್ರವಾಸದಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಮಾಲ್ಡೀವ್ಸ್ ಸೆಪ್ಟೆಂಬರ್ ಆರಂಭದಿಂದಲೂ ಮುಯಿಝು ಅವರ ನಿರೀಕ್ಷಿತ ಭೇಟಿಗಾಗಿ ತಯಾರಿ ನಡೆಸಿದ್ದವು, ಜೂನ್ 9 ರಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅವರು ನವದೆಹಲಿಗೆ ಭೇಟಿ ನೀಡಿದ ನಂತರ ಭಾರತಕ್ಕೆ ಅವರ ಎರಡನೇ ಪ್ರವಾಸ ಇದಾಗಿದೆ..
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಅಕ್ಟೋಬರ್ 6 ರಿಂದ 10 ರವರೆಗೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅ.7 ರಂದು ಮುಯಿಝು ಅವರು ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಅವರು ದೆಹಲಿ, ಮುಂಬೈ ಮತ್ತು ಬೆಂಗಳೂರು ಎಂಬ ಮೂರು ನಗರಗಳಿಗೆ ಪ್ರಯಾಣಿಸುವ ಸಾಧ್ಯತೆಯಿದೆ ಮತ್ತು ಪ್ಯಾಕ್ಡ್ ವೇಳಾಪಟ್ಟಿಗಾಗಿ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ.