ನವದೆಹಲಿ,ಅ. 04(DaijiworldNews/AK): ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ನಿವಾಸ’ವನ್ನು ಶುಕ್ರವಾರ ತೊರೆದಿದ್ದಾರೆ.
ಪೋಷಕರು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅವರು ಮನೆಯಿಂದ ಕಾರಿನಲ್ಲಿ ನಿರ್ಗಮಿಸಿದ್ದಾರೆ. ಲುಟಿಯನ್ಸ್ ದೆಹಲಿಯ ಮಂಡಿ ಹೌಸ್ ಸಮೀಪದ ಫಿರೋಜ್ ಶಾ ರಸ್ತೆಯಲ್ಲಿರುವ ಎಎಪಿಯ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸಕ್ಕೆ ಅವರು ತೆರಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಇ.ಡಿ ಹಾಗೂ ಸಿಬಿಐನಿಂದ ಬಂಧನಕ್ಕೆ ಒಳಗಾದ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿನಿಂದ ಬಂದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಮುಂದಿನ ಚುನಾವಣೆಯಲ್ಲಿ ಮತದಾರರಿಂದ ಪ್ರಾಮಾಣಿಕತೆಯ ಸರ್ಟಿಫಿಕೆಟ್ ಸಿಗುವವರೆಗೂ ಮುಖ್ಯಮಂತ್ರಿ ಸ್ಥಾನ ಏರುವುದಿಲ್ಲ ಎಂದು ಹೇಳಿದ್ದರು.