ಬೆಂಗಳೂರು,ಅ. 06(DaijiworldNews/TA):2025 ರ ಆರಂಭದ ವೇಳೆಗೆ ಮೈಕ್ರಾನ್ ಟೆಕ್ನಾಲಜಿ ಮೊದಲ ಮೇಡ್ ಇನ್ ಇಂಡಿಯಾ ಚಿಪ್ಗಳನ್ನು ಹೊರತರಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದೇಶದಲ್ಲಿ ಈ ವಲಯದಲ್ಲಿ ದೊಡ್ಡ ಹೂಡಿಕೆ ಆಗುತ್ತಿರುವುದರಿಂದ ಭಾರತವು ವಿಶ್ವದ ಮುಂದಿನ ಸೆಮಿಕಂಡಕ್ಟರ್ ಹಬ್ ಆಗುವತ್ತ ಸಾಗುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಐದು ಸೆಮಿಕಂಡಕ್ಟರ್ ತಯಾರಿಕಾ ಪ್ರಸ್ತಾವನೆಗಳಿಗೆ ಅನುಮತಿ ನೀಡಿದ್ದು, ಒಟ್ಟು ಸೇರಿ ₹ 1.52 ಲಕ್ಷ ಕೋಟಿ ಹೂಡಿಕೆಯಾಗಿದೆ.
ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಯು ಪ್ರಧಾನಿ ಮೋದಿಯವರ ದೃಷ್ಟಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಸಚಿವರು ಹೇಳಿದರು.