ಉತ್ತರಾಖಂಡ, ಅ.11(DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯನ್ನು ಕೆಲವರು ಒಂದೇ ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಕೆಲವರು ಮಾತ್ರ ಹಲವಾರು ಬಾರಿ ಪರೀಕ್ಷೆ ಬರೆದ ನಂತರ ಯುಪಿಎಸ್ ಸಿಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ನಾಲ್ಕು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಮಾಮಿ ಬನ್ಸಾಲ್ ಅವರ ಯಶೋಗಾಥೆ ಇದು.
ನಮಾಮಿ ಬನ್ಸಾಲ್ ಅವರು ಉತ್ತರಾಖಂಡದ ರಿಷಿಕೇಶದಲ್ಲಿ ಜನಿಸಿದರು. ನಮಾಮಿ ಅವರು ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯಲು ದೆಹಲಿಗೆ ತೆರಳುತ್ತಾರೆ. ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ. ನಮಾಮಿ ಅವರು ಪದವಿ ಪಡೆದ ಬಳಿಕ ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತಾರೆ.
ಬಳಿಕ ನಮಾಮಿ ಅವರು ಕೆಲವೊಂದು ಕಾರಣಗಳಿಂದ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡುತ್ತಾರೆ. ಅದಕ್ಕಾಗಿ ಅವರು ತಯಾರಿಯನ್ನೂ ಪ್ರಾರಂಭಿಸುತ್ತಾರೆ. ಆದರೆ ಅವರ ಮನೆಯವರಿಗೆ ನಮಾಮಿ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯುವುದು ಅಷ್ಟೇನೂ ಇಷ್ಟವಿರಲಿಲ್ಲ. ಆದರೆ ಮನೆಯವರು ವಿರೋಧದ ಮಧ್ಯೆಯೂ ನಮಾಮಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ.
ನಮಾಮಿ ಅವರು ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ವಿಫಲರಾಗಿರುತ್ತಾರೆ. ಆ ಬಳಿಕ ನಾಲ್ಕನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು 17ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.