ಬೆಂಗಳೂರು, ಅ. 11(DaijiworldNews/AK): ದಸರಾ ಜಾಹೀರಾತು ಬಗ್ಗೆ ಟೀಕಿಸಿದ ಬಿಜೆಪಿಗೆ ಮುಖ್ಯಮಂ ತ್ರಿ ಸಿದ್ದರಾಮಯ್ಯ ತಿರುಗೇ ಟು ನೀಡಿದ್ದು, ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿನೋಡಿಕೊಂಡ ಹಾಗಾಯಿತು ಎಂದು ಹೇಳಿದ್ದಾರೆ.
ವಿಜಯನಗರ ಅರಸರು ವಿಜಯದ ಸಂಕೇತವಾಗಿ ಪ್ರಾರಂ ಭಿಸಿರುವ ಆಯುಧಪೂಜೆ - ದಸರಾ ಉತ್ಸವವನ್ನು ಮೈಸೂರು ಒಡೆಯರ್ ಮುಂ ದುವರೆಸಿದ್ದು, ಇಂ ದಿಗೂ ಆ ಪರಂ ಪರೆಯನ್ನು ಪಾಲಿಸಲಾಗುತ್ತಿದೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಜನಪರವಾಗಿರುವ ನಮ್ಮ ಸರ್ಕಾರವನ್ನು ದುಷ್ಟರಿಂದ ರಕ್ಷಿಸು ಎಂದು ಜಾಹೀರಾತಿನ ಮೂಲಕ ಪ್ರಾರ್ಥಿಸಲಾಗಿದೆ. ಇದು ದಸರಾದ ಆಶಯವೂ ಆಗಿದೆ ಎಂದು ಜಾಹೀರಾತನ್ನು ಸಮರ್ಥಿಸಿಕೊಂಡಿದ್ದಾರೆ.
ಇಡೀ ಜಾಹೀ ರಾತಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ. ಬೇ ರೆಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಕಾಡಿದೆ? ಇದು ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡ ಹಾಗಾಯಿತು ಎಂದು ಹೇಳಿದ್ದಾರೆ.