ಬೆಂಗಳೂರು,ಅ.13(DaijiworldNews/TA):ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರಚೋದನೆ ಕೊಡ್ತಿದೆ. ಇದರ ಬಗ್ಗೆ ಬಿಜೆಪಿಯಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರದಿಂದ ವಾಪಸ್ ಪಡೆದಿರುವ ಬಗ್ಗೆ ಸಿಎಂ ಹೇಳಿಕೆಯನ್ನು ಖಂಡಿಸಿ ಮಾತನಾಡಿದರು. ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸರ್ಕಾರದ ಈ ನಡೆ ಪೊಲೀಸರ ಸ್ಥೈರ್ಯ ಕುಂದಿಸುವ ಕೆಲಸ. ಪೊಲೀಸರಿಗೇ ಈಗ ಅನಿಸಿಬಿಟ್ಟಿದೆ, ಈ ಸಮುದಾಯದವರ ಮೇಲೆ ದೂರು ದಾಖಲಿಸಬಾರದು ಅಂತ. ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರಚೋದನೆ ಕೊಡ್ತಿದೆ. ಇದರ ಬಗ್ಗೆ ಬಿಜೆಪಿಯಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಪಾಕ್, ಬಾಂಗ್ಲಾದಿಂದ ಅಕ್ರಮವಾಗಿ ಬಂದಿರುವವರನ್ನು ಬಂಧಿಸಿದ್ದಾರೆ. ಇವರ ಮೇಲಿನ ಕೇಸ್ಗಳನ್ನೂ ವಾಪಸ್ ಪಡೆದುಕೊಳ್ಳಿ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂಬುವುದಾಗಿ ಲೇವಡಿ ಮಾಡಿದ್ದಾರೆ.