ಕಾರವಾರ, ಅ.13(DaijiworldNews/AA): ಈಜಲು ಹೋಗಿ ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಯುವಕನನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.
ಸಮುದ್ರದ ಪಾಲಾಗುತ್ತಿದ್ದ ಪುನಿತ್ (20) ಎಂಬಾತನನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನಿಂದ 4 ಜನರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಪುನಿತ್ ಎಂಬಾತ ಸಮುದ್ರದಲ್ಲಿ ಅಲೆಯ ಹೊಡೆತಕ್ಕೆ ಸಮುದ್ರ ದಲ್ಲಿ ಕೊಚ್ಚಿ ಹೋಗುತ್ತಿದ್ದುದನ್ನು ರಕ್ಷಣಾ ಸಿಬ್ಬಂದಿ ಗಮನಿಸಿದ್ದು, ಆತನನ್ನು ತಕ್ಷಣ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಮುರುಡೇಶ್ವರದ ಕಡಲ ತೀರದಲ್ಲಿ ಪ್ರವಾಸಿಗರಿಗೆ ನೀರಿಗಿಳಿಯದಂತೆ ಕಳೆದ 10 ದಿನಗಳಿಂದ ನಿರ್ಬಂಧ ಹೇರಲಾಗಿದೆ. ಆದರೂ ದೇವಸ್ಥಾನದ ಮತ್ತೊಂದು ಭಾಗದಲ್ಲಿ ಪ್ರವಾಸಿಗರು ನೀರಿಗಿಳಿಯುತ್ತಿದ್ದರು ಎನ್ನಲಾಗಿದೆ.