ನವದೆಹಲಿ,ಅ.15(DaijiworldNews/TA):ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ಹುಸಿ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ನವದೆಹಲಿಯಿಂದ ಚಿಕಾಗೋಗೆ ಏರ್ ಇಂಡಿಯಾ ನೇರ ವಿಮಾನವನ್ನು ಇಂದು ಕೆನಡಾದ ಇಕಾಲುಯಿಟ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಸುಳ್ಳು ಬೆದರಿಕೆ ಬಂದ ನಂತರ 48 ಗಂಟೆಗಳಲ್ಲಿ ಒಟ್ಟು ಆರು ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಇಂದು ಏರ್ ಇಂಡಿಯಾ ದೆಹಲಿ-ಚಿಕಾಗೋ ವಿಮಾನ, ದಮ್ಮಾಮ್-ಲಕ್ನೋ ಇಂಡಿಗೋ ವಿಮಾನ ಮತ್ತು ಅಯೋಧ್ಯೆ-ಬೆಂಗಳೂರು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ನಿನ್ನೆ ಎರಡು ಇಂಡಿಗೋ ಮತ್ತು ಒಂದು ಏರ್ ಇಂಡಿಯಾ ವಿಮಾನಕ್ಕೂ ನಕಲಿ ಬೆದರಿಕೆಗಳು ಬಂದಿದ್ದವು.
ವಿಮಾನ ಮತ್ತು ಪ್ರಯಾಣಿಕರನ್ನು ನಿಗದಿಪಡಿಸಿದ ಭದ್ರತಾ ಪ್ರೋಟೋಕಾಲ್ ಪ್ರಕಾರ ಮರು-ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಏರ್ ಇಂಡಿಯಾವು ಪ್ರಯಾಣಿಕರಿಗೆ ಅವರ ಪ್ರಯಾಣವನ್ನು ಪುನರಾರಂಭಿಸುವವರೆಗೆ ಸಹಾಯ ಮಾಡಲು ವಿಮಾನ ನಿಲ್ದಾಣದಲ್ಲಿ ಏಜೆನ್ಸಿಗಳನ್ನು ಸಕ್ರಿಯಗೊಳಿಸಿದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.