ಬೆಂಗಳೂರು, ಅ.16(DaijiworldNews/AA): ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಅವರು ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

ಶಾಸಕ ಮುನಿರತ್ನ ಅವರು 20ಕ್ಕೂ ಹೆಚ್ಚು ದಿನಗಳ ಕಾಲ ಸೆರೆವಾಸ ಅನುಭವಿಸಿದ್ದು, ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ. ಇನ್ನು ಜೈಲಿನಿಂದ ಅವರು ನೇರವಾಗಿ ತಮ್ಮ ನಿವಾಸದೆಡೆಗೆ ತೆರಳಿದ್ದಾರೆ.
ಇನ್ನು ಮುನಿರತ್ನ ಅವರು ಜೈನಿಲಿಂದ ಬಿಡುಗಡೆಯಾದ ಹಿನ್ನೆಲೆ ಅವರ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಮುನಿರತ್ನ ಅವರಿಗೆ ಅಕ್ಟೋಬರ್ 15 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜೊತೆಗೆ 1 ಲಕ್ಷ ರೂ. ಪರ್ಸನಲ್ ಬಾಂಡ್ ಮತ್ತು ಇಬ್ಬರ ಶೂರಿಟಿ ನೀಡುವಂತೆ ಷರತ್ತು ವಿಧಿಸಿ ತೀರ್ಪು ನೀಡಿತ್ತು.