ಹಾವೇರಿ, ಅ.17(DaijiworldNews/AK): ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನಿವೇದನ್ ಗುಡಗೇರಿ (12) ಮೃತ ದುರ್ದೈವಿ.
ಬಾಲಕ ನಿವೇದನ್ ಬೆಳಗ್ಗೆ 8.15ರ ಸುಮಾರಿಗೆ ಹಾವೇರಿ ಜಿಲ್ಲೆಯ ಎಸ್ಪಿ ಕಚೇರಿ ಬಳಿಯ ರಸ್ತೆಯಲ್ಲಿ ನಿಂತ ನೀರು ನೋಡಿಕೊಂಡು ಹೋಗೋಣ ಎಂದು ಹೋಗಿದ್ದಾನೆ. ಮಳೆಯ ಅಬ್ಬರಕ್ಕೆ ರಸ್ತೆ ನದಿಯಂತಾಗಿತ್ತು. ಚರಂಡಿ ನೀರಿನಿಂದ ತುಂಬಿತ್ತು. ಇದನ್ನು ತಿಳಿಯದ ಬಾಲಕ ನಿವೇದನ್ ರಸ್ತೆ ಎಂದು ತಿಳಿದು ಕಾಲಿಟ್ಟಾಗ ಚರಂಡಿಯೊಳಗೆ ಬಿದ್ದಿದ್ದಾನೆ.
ವಿಷಯ ತಿಳಿದು ಬಾಲಕ ನಿವೇದನ್ ಬಿದ್ದ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಆರಂಭಿಸಿದರು. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ 11:15ಕ್ಕೆ ಬಾಲಕ ನಿವೇದನ್ ಪತ್ತೆಯಾಗಿದ್ದಾನೆ.ಬಳಿಕ, ಬಾಲಕ ನಿವೇದನ್ನನ್ನು ಹಾವೇರಿ ಜಿಲ್ಲಾಸ್ಪತ್ರೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿವೇದನ್ ಮೃತಪಟ್ಟನು.