ಬೆಂಗಳೂರು, ಅ.18(DaijiworldNews/AK): ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದ್ದು, ಆದರೆ ಯಾವುದೇ ಸ್ಥಳ ಅಂತಿಮವಾಗಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಆಂತರಿಕ ಚರ್ಚೆ ಸಲುವಾಗಿ ಇಂದು ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಸಭೆ ನಡೆಸಿದೆವು. ನಮ್ಮ ಬೆಂಗಳೂರು, ಕರ್ನಾಟಕಕ್ಕೆ ಒಳ್ಳೆಯದಾಗಬೇಕು. ಆರ್ಥಿಕ ಸ್ಥಿತಿ, ವ್ಯವಹಾರಕ್ಕೆ ಉಪಯೋಗ ಆಗಬೇಕು ಎಂದು ಹೇಳಿದರು.
ಒಂದು ವಾರದ ನಂತರ ಮತ್ತೊಂದು ಸಭೆ ಮಾಡುತ್ತೇವೆ. ಸಭೆ ನಡೆದ ಬಳಿಕ ನಿರ್ಧಾರ ಆಗಲಿದೆ.ಅಳೆದು ತೂಗಿ ಈ ನಿರ್ಧಾರ ಮಾಡುತ್ತೇವೆ. ಯಾರದ್ದು ಪರ್ಸನಲ್ ಇಲ್ಲ, ಇದೇ ಜಾಗ ಅಂತ ಇಲ್ಲ. ಡಿಸಿಎಂ ಜೊತೆ ನಗರಾಭಿವೃದ್ಧಿ ಸಚಿವರು ಕೂಡ ಇದ್ದಾರೆ ಎಂದರು.