ಬೆಳಗಾವಿ,ಅ.20(DaijiworldNews/TA):ಚೆನ್ನೈ-ಬೆಳಗಾವಿ ವಿಮಾನಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಚೆನ್ನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಮೇಲ್ ಬಂದಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು, ಇ-ಮೇಲ್ ಎಲ್ಲಿಂದ ಬಂದಿದೆ ಎನ್ನುವುದನ್ನು ತನಿಖೆ ನಡೆಸಿದ್ದಾರೆ.
ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿ ಏರ್ಪೋರ್ಟ್ ಅಥಾರಿಟಿಗೆ ಮೇಲ್ ಬಂದಿದೆ ಎನ್ನಲಾಗಿದೆ. ಆದುದರಿಂದ ಬೆಳಗಾವಿಗೆ ಚೆನೈನಿಂದ ವಿಮಾನ ಸಂಪರ್ಕವನ್ನು ಕಡಿತಗೊಳಸಲಾಗಿದೆ.ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇ ಮೇಲ್ ಎಲ್ಲಿಂದ ಬಂದಿದೆ? ಯಾರು ಕಳುಹಿಸಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗಿನ ಹುಸಿಬಾಂಬ್ ಬೆದರಿಕೆ ಕರೆಗಳು ಸಂದೇಶಗಳು ವಿಮಾನಯಾನ ಸಂಸ್ಥೆಗಳು ಹಾಗೂ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಸೂಕ್ತ ಕ್ರಮ ವಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.