ಚೆನ್ನೈ, ಅ.21(DaijiworldNews/AA): ದಂಪತಿಗೆ 16 ಮಕ್ಕಳನ್ನು ಹೊಂದುವಂತೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸಲಹೆ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ 31 ಜೋಡಿಗಳು ವಿವಾಹವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ನ್ಯಾಯ ಸಚಿವ ಶೇಖರ್ ಬಾಬು ಅವರನ್ನು ಶ್ಲಾಘಿಸಿದ್ದಾರೆ. ದೇವಾಲಯಗಳ ನಿರ್ವಹಣೆ ಮತ್ತು ಸಂಪನ್ಮೂಲಗಳನ್ನು ಸುವ್ಯವಸ್ಥಿತಗೊಳಿಸಲು ಡಿಎಂಕೆ ಸರ್ಕಾರ ಮಾಡಿದ ಪ್ರಯತ್ನಗಳನ್ನು ನಿಜವಾದ ಭಕ್ತರು ಮೆಚ್ಚುತ್ತಾರೆ ಎಂದು ತಿಳಿಸಿದ್ದಾರೆ.
ಹಿರಿಯರು ಹೊಸದಾಗಿ ಮದುವೆಯಾದ ದಂಪತಿಗೆ 16 ರೀತಿಯ ಆಸ್ತಿಯನ್ನು ಹೊಂದುವಂತೆ ಆಶೀರ್ವದಿಸುತ್ತಿದ್ದರು. ಬಹುಶಃ ಈಗ 16 ರೀತಿಯ ಆಸ್ತಿಯ ಬದಲು 16 ಮಕ್ಕಳನ್ನು ಹೊಂದುವ ಸಮಯ ಬಂದಿದೆ ಎಂದು ಹೇಳಿದ್ದಾರೆ.