ಆಂಧ್ರಪ್ರದೇಶ,ಅ.25(DaijiworldNews/TA):ತಿರುಪತಿಯ ಮೂರು ಖಾಸಗಿ ಹೋಟೆಲ್ಗಳಿಗೆ ಬಾಂಬ್ಗಳ ಕುರಿತು ಇಮೇಲ್ ಬೆದರಿಕೆಗಳು ಬಂದಿವೆ. ಈ ಬಗ್ಗೆ ಪೊಲೀಸರಿಗೆ ದೂರು ಬಂದಿದೆ. ಅವರು ಸ್ನಿಫರ್ ಡಾಗ್ಗಳೊಂದಿಗೆ ಹೋಟೆಲ್ಗಳಿಗೆ ಆಗಮಿಸಿ ತನಿಖೆ ನಡೆಸಿದರು, ಆದರೆ ಏನೂ ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಈ ಮೂಲಕ ಬೆದರಿಕೆಗಳು ಸುಳ್ಳು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಬೆದರಿಕೆಯ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಮೇಲ್ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾದ ಡ್ರಗ್ ಕಿಂಗ್ಪಿನ್ ಜಾಫರ್ ಸಿದ್ದಿಕ್ ಹೆಸರು ಕೂಡ ಇದೆ ಎಂದು ಹೇಳಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳ ಗುರುವಾರ ರಾತ್ರಿ 10 ರಿಂದ ಬೆಳಗಿನ ಜಾವ 2 ಗಂಟೆಯವರೆಗೆ ವಿವಿಧ ಹೋಟೆಲ್ಗಳಲ್ಲಿ ಶೋಧ ನಡೆಸಿತು. ಲೀಲಾಮಹಾಲ್ ಬಳಿ ಮೂರು ಹೋಟೆಲ್ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ತಿರುಪತಿಯಲ್ಲಿನ ಮೂರು ಹೊಟೇಲ್ಗಳಿಗೆ ಬಾಂಬ್ ಬೆದರಿಕೆ ಎಚ್ಚರಿಕೆ ಬಂದಿದ್ದು, ಇಮೇಲ್ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ, ಮತ್ತು ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ಧಾರೆ.