ನವದೆಹಲಿ, ಅ.26(DaijiworldNews/AK):ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷವು 23 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿ ಬಿಡುಗಡೆ ಮಾಡಿದೆ.
ಭೂಸಾವಲ್ ಕ್ಷೇತ್ರದಿಂದ ರಾಜೇಶ್ ತುಕಾರಾಂ ಮಾನ್ವಟ್ಕರ್, ಜಲಗಾಂವ್ ನಿಂದ ಸ್ವಾತಿ ಸಂದೀಪ್ ವಾಕೇಕರ್, ಅಕೋಟ್ನಿಂದ ಮಹೇಶ್ ಗಂಗನೆ, ವಾರ್ಧಾದಿಂದ ಶೇಖರ್ ಪ್ರಮೋದಬಾಬು ಶೆಂಡೆ, ಸಾವ್ನರ್ನಿಂದ ಅನುಜಾ ಸುನೀಲ್ ಕೇದಾರ್, ನಾಗ್ಪುರ ದಕ್ಷಿಣದಿಂದ ಗಿರೀಶ್ ಕೃಷ್ಣರಾವ್ ಪಾಂಡವ್, ಕಮ್ತಿಯಿಂದ ಸುರೇಶ್ ಯಾದವರಾವ್ ಭೋಯರ್, ಭಂಡಾರಾ ಕ್ಷೇತ್ರದಿಂದ ಪೂಜಾ ಗಣೇಶ್ ಥಾವ್ಕರ್, ಅರ್ಜುನಿ-ಮೋರ್ಗಾಂ ವ್ ಕ್ಷೇತ್ರದಿಂದ ದಲೀಪ್ ವಾಮನ್ ಬನ್ಸೋಡ್ ಅವರನ್ನು ಕಣಕ್ಕಿಳಿಸಿದೆ.
ಅಮ್ಗಾಂವ್ ನಿಂದ ರಾಜ್ಕುಮಾರ್ ಲೋಟುಜಿ ಪುರಂ, ರಾಳೇಗಾಂವ್ನಿಂದ ವಸಂತ ಚಿಂದೂಜಿ ಪುರ್ಕೆ, ಯವತ್ಮಾಲ್ನಿಂದ ಬಾಳಾ ಸಾಹೇಬ್ ಶಂಕರರಾವ್ ಮಂಗೂಲ್ಕರ್, ಅಮಿಯಿಂದ ಜಿತೇಂದ್ರ ಶಿವಾಜಿರಾವ್ ಮೋಘೆ, ಉಮರ್ಖೇಡ್ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಉಮರ್ಖೇಡ್ ನಿಂದ ಸಾಹೇಬರಾವ್ ದತ್ತರಾವ್ ಕಾಂಬಳೆ, ಜಲ್ನಾದಿಂದ ಕಾಲಿಯಾಸ್ ಕಿಸನ್ರಾವ್ ಗೊರ್ತಂ ಟ್ಯಾಲ್, ಔರಂಗಾಬಾದ್ ಪೂರ್ವ ಕ್ಷೇತ್ರದಿಂದ ಮಧುಕರ್ ಕೃಷ್ಣರಾವ್ ದೇಶಮುಖ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 48 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.