ಮುಂಬೈ , ಅ.27(DaijiworldNews/AK): ನೇಹಾ ಭೋಸಲೆ ಜೀವನದಲ್ಲಿ ದೊಡ್ಡ ಕನಸುಗಳನ್ನು ಹೊಂದಿದ್ದರು. ನೇಹಾ ಇಂಗ್ಲೆಂಡ್ನಲ್ಲಿ ನೆಲೆಸಲು ಬಯಸಿದ್ದರು. ಆದರೆ ಹಣೆ ಬರಹವೇ ಬೇರೆ ಇತ್ತು, ಅವರ ಯುಪಿಎಸ್ಸಿ ಕಥೆ ಇಲ್ಲಿದೆ.
ಇಂಜಿನಿಯರಿಂಗ್ ಮುಗಿಸಿ CAT ಪರೀಕ್ಷೆ ಕೊಟ್ಟು IIM ನಲ್ಲಿ 99% ಅಂಕ ಪಡೆದು ಪ್ರವೇಶ ಪಡೆದವರು ನೇಹಾ. ಅವರ ಕಾರ್ಪೊರೇಟ್ ವೃತ್ತಿಜೀವನವು ಪ್ರಾರಂಭವಾಯಿತು, ಅದನ್ನು ಮಧ್ಯದಲ್ಲಿ ಬಿಟ್ಟು, ಸರ್ಕಾರಿ ಉದ್ಯೋಗಕ್ಕಾಗಿ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಆಕೆಯ ಶ್ರಮಕ್ಕೆ ತಕ್ಕ ಫಲ ಸಿಕ್ಕಿ ಐಎಎಸ್ ಅಧಿಕಾರಿಯಾದರು.
ನೇಹಾ ಭೋಸಲೆ ಮಹಾರಾಷ್ಟ್ರದ ರಾಜಧಾನಿ ಮುಂಬೈ ನಿವಾಸಿ. ನೇಹಾ ಕೂಡ ತನ್ನ ಜೀವನದಲ್ಲಿ ಸಾಕಷ್ಟು ಕನಸು ಕಂಡಿದ್ದಳು. ಅವುಗಳಲ್ಲಿ ಅತ್ಯಂತ ವಿಶೇಷವಾದದ್ದು ಇಂಗ್ಲೆಂಡ್ ಗೆ ಶಿಫ್ಟ್ ಆಗುವ ಅವರ ಕನಸು. ಅವರು ಪ್ರಸಿದ್ಧ ಲೇಖಕ ಎನಿಡ್ ಬ್ಲೈಟನ್ ಅವರ ರಹಸ್ಯ ಸರಣಿಯನ್ನು ಓದುತ್ತಾ ಬೆಳೆದರು,ಅವರ ಎಂಬಿಎ ಮಾರ್ಚ್ 2014 ರಲ್ಲಿ ಪೂರ್ಣಗೊಂಡಿತು. ತನ್ನ ಕೆಲಸವನ್ನು ಪ್ರಾರಂಭಿಸಿದಾಗ, UPSC ಫಲಿತಾಂಶಗಳು ಬಿಡುಗಡೆಯಾಯಿತು.
ಆದರೆ ನೇಹಾ ಭೋಂಸ್ಲೆ ತಮ್ಮ ಕನಸುಗಳನ್ನು ಮರೆತು ಐಎಎಸ್ ಅಧಿಕಾರಿಯಾದರು. ನೇಹಾ ಭೋಸ್ಲೆ 2019 ರ UPSC ಪರೀಕ್ಷೆಯಲ್ಲಿ 15 ನೇ ರ್ಯಾಂಕ್ ಗಳಿಸಿ ತಮ್ಮ ಜೀವನದ ಮುಂದಿನ ಹೆಜ್ಜೆ ಇಟ್ಟರು.