ಅಯೋಧ್ಯೆ,ಅ.29(DaijiworldNews/AK): ಅಯೋಧ್ಯೆಯಲ್ಲಿ 8ನೇ ಆವೃತ್ತಿಯ ದೀಪೋತ್ಸವದ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ನಾಳೆ (ಅ.30) ಅಯೋಧ್ಯೆ ನಗರವನ್ನು 28 ಲಕ್ಷ ಮಣ್ಣಿನ ಹಣತೆಗಳಿಂದ ದೀಪ ಬೆಳಗಿಸುವ ಮೂಲಕ ಮತ್ತೊಂದು ವಿಶ್ವ ದಾಖಲೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ದೀಪೋತ್ಸವದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ದೀಪಗಳನ್ನು ಇರಿಸುವ ಕೆಲಸ ನಡೆಯುತ್ತಿದೆ. ಲೇಸರ್, ಸೌಂಡ್ ಮತ್ತು ಡ್ರೋನ್ ಶೋಗಳ ಪ್ರಯೋಗಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ನಡೆಯುತ್ತಿರುವ ಮೊದಲ ದೀಪೋತ್ಸವವಾಗಿದೆ. ಈ ದೀಪೋತ್ಸವವು ಪವಿತ್ರ ನಗರದ ಆಧ್ಯಾತ್ಮಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಸಾರವನ್ನು ತೋರಿಸುತ್ತದೆ. ಮಯನ್ಮಾರ್, ನೇಪಾಳ, ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ ಈ 6 ದೇಶಗಳ ಕಲಾವಿದರು ಪ್ರದರ್ಶಿಸುತ್ತಾರೆ. ಉತ್ತರಾಖಂಡದ ರಾಮ್ ಲೀಲಾ ಪ್ರಸ್ತುತಿ ಕೂಡ ನಡೆಯಲಿದೆ.