ಬಳ್ಳಾರಿ, ಅ.30(DaijiworldNews/AK): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್ಗೆ ಇಂದು (ಅ.30) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಬೆನ್ನು ನೋವಿನಿಂದ ಬಳುತ್ತಿದ್ದ ದರ್ಶನ್ಗೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಬೇಲ್ ಸಿಕ್ಕಿದೆ. ಈ ಹಿನ್ನೆಲೆ ಕುಂಟುತ್ತಲೇ ದರ್ಶನ್ ಹೈ ಸೆಕ್ಯೂರಿಟಿ ಸೆಲ್ನಿಂದ ಹೊರಬಂದಿದ್ದಾರೆ. 5 ತಿಂಗಳುಗಳ ಕಾನೂನು ಸಮರ ನಂತರ ಇಂದು ದರ್ಶನ್ ಬಿಡುಗಡೆಯಾಗಿದ್ದಾರೆ. ಈ ವೇಳೆ, ದರ್ಶನ್ ನೋಡಲು ಸಾವಿರಾರು ಸಂಖ್ಯೆ ನಟನ ಫ್ಯಾನ್ಸ್ ಜೈಲಿನ ಬಳಿ ಜಮಾಯಿಸಿದ್ದರು.ಬಳ್ಳಾರಿ ಜೈಲಿನ ಬಳಿ ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದ ಕಾರಣ, ದರ್ಶನ್ ಕುಟುಂಬಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು
ಜೂನ್ 11ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರು.